janadhvani

Kannada Online News Paper

ನಕಲಿ ಪಾಸ್‌ಪೋರ್ಟ್‌ನಲ್ಲಿ ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ಯತ್ನ- ಬಂಧನ

ಈ ಹಿಂದೆ ಸೌದಿ ಅರೇಬಿಯಾದಲ್ಲಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅವನನ್ನು ಬಂಧಿಸಿ ಗಡೀಪಾರು ಮಾಡಲಾಗಿತ್ತು.

ರಿಯಾದ್: ನಕಲಿ ಪಾಸ್‌ಪೋರ್ಟ್‌ನಲ್ಲಿ ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ಯತ್ನಿಸಿದ ಅಕ್ರಮ ಪ್ರಯಾಣಿಕನನ್ನು ಜವಾಝಾತ್ ಅಧಿಕಾರಿಗಳು ಬಂಧಿಸಿದ್ದಾರೆ.

ಹಾಯಿಲ್ ವಿಮಾನ ನಿಲ್ದಾಣದ ಮೂಲಕ ಸೌದಿ ಅರೇಬಿಯಾ ಪ್ರವೇಶಿಸಲು ಯತ್ನಿಸಿದ ಅಫ್ಘಾನಿಸ್ತಾನ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ನಕಲಿ ಪಾಸ್‌ಪೋರ್ಟ್ ಬಳಸಿ ಸೌದಿ ಅರೇಬಿಯಾ ಪ್ರವೇಶಿಸಲು ಯತ್ನಿಸಿದ್ದ. ಈ ಹಿಂದೆ ಸೌದಿ ಅರೇಬಿಯಾದಲ್ಲಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅವನನ್ನು ಬಂಧಿಸಿ ಗಡೀಪಾರು ಮಾಡಲಾಗಿತ್ತು.

ನಂತರ ನಕಲಿ ಪಾಸ್ ಪೋರ್ಟ್ ತಯಾರಿಸಿ ಸೌದಿ ಅರೇಬಿಯಾ ಪ್ರವೇಶಿಸಲು ಯತ್ನಿಸಿದ್ದ. ಕಳೆದ ದಿನ ರಿಯಾದ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಿ ಪ್ರಜೆಯನ್ನೂ ಇದೇ ರೀತಿಯಲ್ಲಿ ಬಂಧಿಸಲಾಗಿದೆ.