janadhvani

Kannada Online News Paper

ಕೆಸಿಎಫ್ ದಮ್ಮಾಮ್ ಝೋನ್: ‘ಝುಮ್ರಾಃ-23’- ಪ್ರಚಾರ ಸಭೆ ಹಾಗೂ ಪೋಸ್ಟರ್ ಬಿಡುಗಡೆ

ದಮ್ಮಾಮ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದಮ್ಮಾಮ್ ಝೋನ್ ಆಯೋಜಿಸುತ್ತಿದೆ ‘ಝುಮ್ರಾಃ-23’ ಕುಟುಂಬ ಸಮ್ಮಿಳನ.

ಡಿ.21ರಂದು ನಡೆಯುವ ಕುಟುಂಬ ಸಮ್ಮಿಳನದ ಪ್ರಚಾರ ಸಭಾ ಕಾರ್ಯಕ್ರಮವು ನವೆಂಬರ್ 3ರಂದು ಹಾಲಿಡೇಸ್ ರೆಸ್ಟೋರೆಂಟ್ ಸೀಕೋ ದಮ್ಮಾಮ್‌ನಲ್ಲಿ ನಡೆಯಿತು. ಯೂಸುಫ್ ಸ ಅದಿ ಅಯ್ಯಂಗೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ಮುಖ್ಯ ಭಾಷಣ ನಡೆಸಿದರು. ಶುಕೂರ್ ತಂಙಳ್, ಫಾರೂಕ್ ಕುಪ್ಪೆಟ್ಟಿ ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ZUMRAH-23 ಪೋಸ್ಟರ್ ಬಿಡುಗಡೆ ಮಾಡಲಾಯಿತು. 50 ಮಂದಿ ಝುಮ್ರಾಃ ಆಕ್ಟೀವ್ ತಂಡವನ್ನು ರಚಿಸಲಾಯಿತು. ಸಮಾರಂಭದಲ್ಲಿ PC ಉಸ್ತಾದರನ್ನು ಸನ್ಮಾನಿಸಲಾಯಿತು. ಎನ್. ಎಸ್ ಅಬ್ದುಲ್ಲಾಹ್ ಹಾಜಿ ಸ್ವಾಗತಿಸಿ, ಮುಹಮ್ಮದ್ ಮಲೆಬೆಟ್ಟು ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com