janadhvani

Kannada Online News Paper

ಯುಎಇ: ವೀಸಾ ನಿಯಮಗಳನ್ನು ಉದಾರ ಗೊಳಿಸಲಾಗಿದೆ

ಅಬುಧಾಬಿ: ದೇಶದ ವೀಸಾ ನಿಯಮಗಳು ಉದಾರಗೊಂಡಿದೆ. ಈ ಕುರಿತು ಅಬುಧಾಬಿ ಎಕ್ಸಿ ಕೌನ್ಸಿಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಚಿವಾಲಯ ಒಪ್ಪಂದಕ್ಕೆ ಸಹಿಹಾಕಿದೆ.

ಅಬುಧಾಬಿಯಲ್ಲಿ ವಿದೇಶಿ ಕಂಪನಿಗಳನ್ನು ಅತಿಯಾಗಿ ಆಕರ್ಷಿಸಲು ಇದು ಅಪೇಕ್ಷಣೀಯವಾಗಿದೆ.ಎಲ್ಲಾ ವಲಯಗಳಲ್ಲೂ ವಿದೇಶಿಯರಿಗೆ ಹೆಚ್ಚಿನ ಪಾಲುದಾರಿಕೆಯನ್ನು ನೀಡಲಾಗುತ್ತದೆ.

ಏತನ್ಮಧ್ಯೆ, ಮಾನವ ಸಂಪನ್ಮೂಲ ಮತ್ತು ಸ್ಥಳೀಯ ಸ್ವದೇಶೀಕರಣ ಸಚಿವಾಲಯವು ಗೃಹ ನೌಕರರಿಗೆ 11 ತದ್ಬೀರ್ ಕೇಂದ್ರಗಳನ್ನು ಪ್ರಾರಂಭಿಸಿದೆ. ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಕಡಿಮೆ ಶುಲ್ಕದಲ್ಲಿ ಸೇವೆ ಲಭ್ಯವಾಗಲಿದೆ.

ಅಬುಧಾಬಿಯಲ್ಲಿ ಎರಡು, ದುಬೈ ನಲ್ಲಿ ನಾಲ್ಕು, ಶಾರ್ಜಾ, ಫುಜೈರಾದಲ್ಲಿ ಒಂದು ಮತ್ತು ಅಜ್ಮಾನ್ನಲ್ಲಿ ಮೂರು ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಈ ವರ್ಷದ ಕೊನೆಯಲ್ಲಿ, 14 ಕೇಂದ್ರಗಳನ್ನು ಹೆಚ್ಚುವರಿಯಾಗಿ ಪ್ರಾರಂಭಿಸಲಾಗುತ್ತದೆ.ಭಾರತೀಯರು ಸೇರಿದಂತೆ ವಿದೇಶೀ ಮನೆಕೆಲಸಗಾರರನ್ನು ಪಡೆಯಲು ದರಗಳಲ್ಲಿ ಕಡಿತ ಗೊಳಿಸಲಾಗಿದೆ.

ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ನಾಸರ್ ಬಿನ್ ಥಾನಿ ಅಲ್ ಹಮೇಲಿ ಮಾತನಾಡುತ್ತಾ, ತದ್ಬೀರ್ ಕೇಂದ್ರಗಳು ಕಾರ್ಮಿಕರ ಸಚಿವಾಲಯ ಸೂಚಿಸಿದ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಉತ್ತಮ ಸೇವೆಗಳನ್ನು ಒದಗಿಸಲಿದೆ ಎಂದು ಹೇಳಿದರು.

ಗೃಹ ಕೆಲಸಗಾರರನ್ನು ಕಳುಹಿಸುವ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಈ ಬದಲಾವಣೆ ಎಂದು ಸಚಿವಾಲಯದ ಅಂಡರ್ ಸೆಕ್ರೆಟರಿ ಸೈಫ್ ಅಹ್ಮದ್ ಅಲ್ ಸುವೈದಿ ಹೇಳಿದರು.

ಕುಟುಂಬಗಳು ಮತ್ತು ಸಂಸ್ಥೆಗಳ ಒಪ್ಪಂದಗಳು ಮುಂತಾದ ಕಾರ್ಯಗಳಲ್ಲಿ ಕಾನೂನು ವಿರುದ್ದವಾಗಿ ಕಾರ್ಯಾಚರಿಸುವುದಾಗಿ ನೇಮಕಾತಿ ಏಜೆನ್ಸಿಗಳ ಬಗ್ಗೆ ಹಲವಾರು ದೂರುಗಳಿವೆ.

ಗೃಹ ಕಾರ್ಮಿಕರ ನೇಮಕಾತಿ ಬಗ್ಗೆ ಭಾರತ, ಶ್ರೀಲಂಕಾ ಮತ್ತು ಕೀನ್ಯಾಗಳಂತಹ ದೇಶಗಳೊಂದಿಗೆ ಸಚಿವಾಲಯವು ಕಡತಗಳಿಗೆ ಸಹಿ ಹಾಕಿದೆ.ಫಿಲಿಫೈನ್ಸ್ ಕಾರ್ಮಿಕರನ್ನು ಯುಎಇಗೆ ಕರೆ ತರುವ ವೆಚ್ಚವನ್ನು 20,000 ದಿಂದ 12,000 ದಿರ್ಹಂಗೆ ಇಳಿಸಲಾಗಿದೆ.

ಇದು ಕೆಲಸಗಾರರ ನೇಮಕಾತಿಯ ಕುರಿತು ನಿಖರವಾದ ಪರಿಸ್ಥಿತಿಗಳನ್ನು ಮತ್ತು ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲು ಉಪಯುಕ್ತವಾಗಿದೆ.ತದ್ಬೀರ್ ಕೇಂದ್ರದ ನಿಬಂಧನೆಗಳಿಗೆ ತದ್ವಿರುದ್ಧವಾಗಿ ಗೃಹ ಕೆಲಸಗಾರರನ್ನು ನಿಯಮಿಸುವ ಸಂಸ್ಥೆಗಳ ಪರವಾನಗಿಗಳನ್ನು ನವೀಕರಿಸಲು ಅನುಮತಿ ನೀಡಲಾಗುವುದಿಲ್ಲ.

ಭಾರತ ಮತ್ತು ನೇಪಾಳದಿಂದ ದೇಶೀಯ ಕಾರ್ಮಿಕರನ್ನು ನೇಮಕ ಮಾಡಲು ಆರು ಸಾವಿರ ದಿರ್ಹಮ್ ಶುಲ್ಕಗಳು ನೀಡಬೇಕು.

ಫಿಲಿಪೈನ್ಸ್, ಇಂಡೋನೇಷಿಯಾ ಮತ್ತು ಶ್ರೀಲಂಕಾದ ಕೆಲಸಗಾರರಿಗೆ 8,000 ಮತ್ತು ಬಾಂಗ್ಲಾದೇಶದವರಿಗೆ 4,500, ಇಥಿಯೋಪಿಯಾ, ಕೀನ್ಯಾ ಮತ್ತು ಉಗಾಂಡಾದ ಕಾರ್ಮಿಕರಿಗೆ 3,500 ಶುಲ್ಕ ನೀಡಬೇಕು.

ಭಾರತ, ಬಾಂಗ್ಲಾದೇಶ, ಕೀನ್ಯಾ ಮತ್ತು ನೇಪಾಳಗಳಿಗೆ ತಿಂಗಳಿಗೆ 2500 ದಿರ್ಹಂ, ಫಿಲಿಪೈನ್ಸ್ ಮತ್ತು ಇಂಡೋನೇಶಿಯಾದವರಿಗೆ 2200 ದಿರ್ಹಮ್ ಮತ್ತು ಇಥಿಯೋಪಿಯಾ ಮತ್ತು ಉಗಾಂಡದ ಕೆಲಸಗಾರರಿಗೆ 2300 ದಿರ್ಹಂ ವರೆಗೆ ಪಾವತಿಸಬೇಕು.

error: Content is protected !! Not allowed copy content from janadhvani.com