janadhvani

Kannada Online News Paper

ಕೌಟುಂಬಿಕ ವೀಸಾದಿಂದ ಉದ್ಯೋಗ ವೀಸಾಗಳಿಗೆ ಬದಲಾವಣೆ ಸುಲಭ- ಹೊಸ ಇ-ಸೇವೆ ಪ್ರಾರಂಭ

ನಿವಾಸಿಗಳ ಅವಲಂಬಿತರಾಗಿ ಕುಟುಂಬ ವೀಸಾದಲ್ಲಿ ಕತಾರಿನಲ್ಲಿರುವವರಿಗೆ ಉದ್ಯೋಗ ಲಭ್ಯವಾದಲ್ಲಿ ಆನ್‌ಲೈನ್‌ ಮೂಲಕ ಉದ್ಯೋಗ ವೀಸಾಕ್ಕೆ ಸುಲಭವಾಗಿ ಬದಲಾಯಿಸಬಹುದು.

ದೋಹಾ: ಕೌಟುಂಬಿಕ ವೀಸಾದಲ್ಲಿರುವವರು ಕೆಲಸದ ವೀಸಾಗಳಿಗೆ ಬದಲಾಯಿಸಲು ಕತಾರ್ ಕಾರ್ಮಿಕ ಸಚಿವಾಲಯವು ಇ-ಸೇವೆಯನ್ನು ಪ್ರಾರಂಭಿಸಿದೆ. ಈ ಮೂಲಕ, ಉದ್ಯೋಗದಾತರು ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಖತ್ತರಿನಲ್ಲಿರುವ ನಿವಾಸಿಗಳಿಗೆ ತ್ವರಿತವಾಗಿ ಉದ್ಯೋಗವನ್ನು ಒದಗಿಸಲು ಸಾಧ್ಯವಾಗಲಿದೆ.

ಖಾಸಗಿ ಕಂಪನಿಗಳಿಗೆ ವಿದೇಶದಿಂದ ನೇಮಕಾತಿ ಮಾಡಿಕೊಳ್ಳದೆ ಖತ್ತರಿನಲ್ಲಿರುವ ನಿವಾಸಿಗಳನ್ನು ಸ್ವತಃ ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿದೆ ಈ ಸೇವೆ. ನಿವಾಸಿಗಳ ಅವಲಂಬಿತರಾಗಿ ಕುಟುಂಬ ವೀಸಾದಲ್ಲಿ ಕತಾರಿನಲ್ಲಿರುವವರಿಗೆ ಉದ್ಯೋಗ ಲಭ್ಯವಾದಲ್ಲಿ ಆನ್‌ಲೈನ್‌ ಮೂಲಕ ಉದ್ಯೋಗ ವೀಸಾಕ್ಕೆ ಸುಲಭವಾಗಿ ಬದಲಾಯಿಸಬಹುದು.

ಅಗತ್ಯ ಕಾರ್ಯವಿಧಾನಗಳು ಮತ್ತು ದಾಖಲೆಗಳನ್ನು ಸಚಿವಾಲಯವು ಎಕ್ಸ್ ಪ್ಲಾಟ್‌ಫಾರ್ಮ್ ಮೂಲಕ ಹಂಚಿಕೊಂಡಿದೆ. ಕತಾರ್ ಅಭಿವೃದ್ಧಿ ಬ್ಯಾಂಕ್ ಸಹಯೋಗದಲ್ಲಿ ಕಾರ್ಮಿಕ ಸಚಿವಾಲಯವು ಆಯೋಜಿಸಿದ್ದ ಸೆಮಿನಾರ್‌ನಲ್ಲಿ ಹೊಸ ಇ-ಸೇವೆಯನ್ನು ಘೋಷಿಸಲಾಗಿದೆ. ಉದ್ಯೋಗದಾತರ ಸ್ಮಾರ್ಟ್ ಕಾರ್ಡ್, ಉದ್ಯೋಗಿಯ ಕ್ಯೂ ಐಡಿಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆ ಮತ್ತು ಎಸ್ಟಾಬ್ಲಿಷ್ಮೆಂಟ್ ಕಾರ್ಡ್‌ನೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

error: Content is protected !! Not allowed copy content from janadhvani.com