janadhvani

Kannada Online News Paper

ಭಾರತೀಯ ಉಮ್ರಾ ಯಾತ್ರಾರ್ಥಿ ಮದೀನಾದಲ್ಲಿ ನಿಧನ- ಜನ್ನತುಲ್ ಬಖೀನಲ್ಲಿ ದಫನ

ಮದೀನಾ ಮುನವ್ವರದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಸಾಂತ್ವನ ಕಾರ್ಯಕರ್ತರು, ದಫನ ಕಾರ್ಯಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು

ಮದೀನಾ ಮುನವ್ವರ: ಭಾರತದಿಂದ ಉಮ್ರಾ ನಿರ್ವಹಿಸಲು ಆಗಮಿಸಿದ್ದ, ಕರ್ನಾಟಕದ ಕುಶಾಲನಗರದ, ರಸೂಲ್ ಪುರದ ಅವ್ವಮ್ಮ( ಸಾರಮ್ಮ) ಎಂಬ ಮಹಿಳೆಯೋರ್ವರು ನಿನ್ನೆ ಮದೀನಾದಲ್ಲಿ ನಿಧನ ಹೊಂದಿದ್ದರು. ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಸಹಕಾರದೊಂದಿಗೆ,ಅ,17 ರಂದು ಜನ್ನತುಲ್ ಬಖೀನಲ್ಲಿ ದಫನ ಕಾರ್ಯ ಪೂರ್ಣಗೊಂಡಿದೆ.

ಮದೀನಾ ಮುನವ್ವರದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಸಾಂತ್ವನ ಇಲಾಖೆಯ ಕಾರ್ಯಕರ್ತರು, ದಫನ ಕಾರ್ಯಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ. ಮರಣೋತ್ತರ ಕಾರ್ಯದಲ್ಲಿ ಅವರ ಕುಟುಂಬಕ್ಕೆ ನೆರವಾದರು.

ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ಅವಶ್ಯ ದಾಖಲೆಗಳನ್ನು ಸರಿಪಡಿಸಿ, ಭಾರತ ರಾಯಭಾರಿ ಕಚೇರಿ ಯಿಂದ ನಿರಪೇಕ್ಷಣಾ ಪತ್ರ ಪಡೆಯುವ ಹಾಗೂ ಮತ್ತಿತರ ಕಾನೂನು ಪ್ರಕ್ರಿಯೆಗಳಿಗೆ ನೆರವಾಗಿ ಅಂತಿಮ ಸಂಸ್ಕಾರದವರೆಗೆ ಕೆಸಿಎಫ್ ಕಾರ್ಯಕರ್ತರು ಮೃತರ ಸಂಬಂಧಿಕರೊಡನೆ ಕೈಜೋಡಿಸಿದರು.

ಭಾರತದ ವಿವಿಧ ರಾಜ್ಯಗಳಿಂದ ಆಗಮಿಸುವ ಉಮ್ರಾ ಯಾತ್ರಾರ್ಥಿಗಳು ಮದೀನಾ ಮುನವ್ವರದಲ್ಲಿ ಮರಣ ಸಂಭವಿಸಿದ ಮಾಹಿತಿ ಲಭಿಸಿದ ಕೂಡಲೇ ಕೆಸಿಎಫ್ ಸಾಂತ್ವನ ಇಲಾಖೆಯ ಕಾರ್ಯಕರ್ತರು ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಮಾತ್ರವಲ್ಲದೆ ಮರಣೋತ್ತರ ಕಾರ್ಯದಲ್ಲೂ ಭಾಗಿಯಾಗಿ ಮೃತರ ಕುಟುಂಬದವರನ್ನು ಸಾಂತ್ವನ ಪಡಿಸಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಮದೀನಾ ಮುನವ್ವರದಲ್ಲಿ 40 ಕ್ಕೂ ಅಧಿಕ ಮಂದಿಯ ದಫನ ಕಾರ್ಯಕ್ಕೆ ಬೇಕಾದ ದಾಖಲೆ ಪತ್ರಗಳನ್ನು ಸಿದ್ಧಪಡಿಸುವಲ್ಲಿ ಮದೀನಾ ಕೆ.ಸಿ.ಎಫ್ ಸಾಂತ್ವನ ಇಲಾಖೆಯು ಯಶಸ್ವಿಯಾಗಿದೆ.

error: Content is protected !! Not allowed copy content from janadhvani.com