ಮಂಗಳೂರು : ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಂ ಜನ್ಮ ಮಾಸಾಚರಣೆಯ ಪ್ರಯುಕ್ತ ಪ್ರತೀ ವರ್ಷ ಆಚರಿಸಿಕೊಂಡು ಬರುವ ಮೌಲಿದ್ ಮಜ್ಲಿಸ್ ಮಸ್ಜಿದುತ್ತಖ್ವ ಪಂಪ್ ವೆಲ್ ನಲ್ಲಿ ಯೆನೇಪೋಯ ಅಬ್ದುಲ್ಲ ಕುಂಞ ಅಧ್ಯಕ್ಷ ತೆಯಲ್ಲಿ ಕುಂಬೋಳ್ ಕೆ ಎಸ್ ಮುಕ್ತಾರ್ ತಂಞಲ್ ನೇತೃತ್ವದಲ್ಲಿ ನಡೆಯಿತು. ಖತೀಬ್ ಯಾಸಿರ್ ಸಖಾಫಿ ಅಲ್ ಅಝ್ ಹರಿ ಹಿತವಚನಗಳೊಂದಿಗೆ ಮುಅದ್ದಿನ್ ಇಬ್ರಾಹಿಮ್ ಮುಸ್ಲಿಯಾರ್ ಹಾಗೂ ಹಫೀಪ್ ಕೆ ಸಿ ರೋಡ್ ಇಂಪಾದ ಧ್ವನಿಯಲ್ಲಿ ಮೌಲಿದ್ ಆಲಾಪನೆ ಮಾಡಿದರು.
ಕೇಂದ್ರ ಜುಮಾ ಮಸೀದಿ ಖತೀಬ್ ಅಬುಲ್ ಅಕ್ರಂ ಉಸ್ತಾದ್ ,ಕಂಕನಾಡಿ ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಸ ಅದಿ ಬೋಳಿಯಾರ್, ಈದ್ಗ ಮಸೀದಿ ಖತೀಬ್ ಮುಸ್ತಫಾ ಅಝ್ಹರಿ ಕೊಡಗು , ಎಸ್ ಎಮ್ ರಷೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಬಿ ಎಂ ಮುಮ್ತಾಜ್ ಅಲಿ, ಕುಂಬಳೆ ಅರಬಿ ಹಾಜಿ,, ಹೈದರ್ ಪರ್ತಿಪಾಡಿ,ಕೆ ಮುಹಮ್ಮದ್ ಹಾರಿಸ್ ಮೆರೈನ್, ಫಿ ಸಿ ಹಾಸಿರ್, ಅಬ್ದುಲ್ ರವೂಪ್ ಸುಲ್ತಾನ್ ಗೋಲ್ಡ್ , ಬಿ ಎಂ ಸೌಕತ್ ಆಲಿ ಸಮೇತ ಹಲವಾರು ಉಲಮಾ ಉಮರಾ ನಾಯಕರುಗಳು ಹಿತೈಷಿಗಳು ಭಾಗವಹಿಸಿದ್ದರು.