ಮಕ್ಕತುಲ್ ಮುಕರ್ರಮಃ: ಮರ್ಕಝ್ ಕೈಕಂಬ ಮಕ್ಕತುಲ್ ಮುಕರ್ರಮ ಯುನಿಟ್ ವತಿಯಿಂದ ಯಾ ಫತ್ತಾಹ್ ಮಜ್ಲಿಸ್ ಹಾಗೂ ನೂತನ ಯುನಿಟ್ ರಚನೆ ಮಕ್ಕಾದಲ್ಲಿ ಮಂಗಳವಾರ ನಡೆಯಿತು.
ಆಸಿಫ್ ಹಾಜಿ ಸೂರಲ್ಪಾಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಸಾರಥಿ ಬದ್ರುದ್ದೀನ್ ಅಝ್ಹರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು.
ಬಳಿಕ ಮರ್ಕಝ್ ಕೈಕಂಬ ಮಕ್ಕತುಲ್ ಮುಕರ್ರಮ ಯುನಿಟಿನ ನೂತನ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.
ಗೌರವ ಅಧ್ಯಕ್ಷರು : ಮೂಸಾ ಹಾಜಿ ಕಿನ್ಯಾ
ಡೈರೆಕ್ಟರ್ : ಆಸಿಫ್ ಹಾಜಿ ಸೂರಲ್ಪಾಡಿ
ಅಧ್ಯಕ್ಷರು : ಎಂ.ಐ.ಶರೀಫ್ ಮಲ್ಲೂರು
ಕಾರ್ಯದರ್ಶಿ : ಅಸ್ತರ್ ಅಲಿ ಪಾಂಡೇಶ್ವರ
ಕೋಶಾಧಿಕಾರಿ : ನಾಸಿರ್ ಬಡಕಬೈಲ್
ಉಪಾಧ್ಯಕ್ಷರು : ಅಬ್ದುಲ್ ಕಬೀರ್ ಜಿದ್ದಾ
ಜೊತೆ ಕಾರ್ಯದರ್ಶಿ : ಅಶ್ರಫ್ ಗುರುವಾಯನಕೆರೆ
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಮ್ರಾನ್ ಕುದ್ರೋಳಿ, ಸಫ್ವಾನ್ ಅಡ್ಯಾರ್, ಸೈದ್ ಅಲವಿ ಕೇರಳ, ಮುನೀರ್ ಬಡಕಬೈಲ್, ಅಬೂಬಕ್ಕರ್ ಸಿದ್ದೀಕ್ ಮರ್ಕಝ್ ನಗರ ಅವರನ್ನು ನೇಮಕಗೊಳಿಸಲಾಯಿತು. ಬಳಿಕ ಯಾ ಫತ್ತಾಹ್ ಮಜ್ಲಿಸ್ ಹಾಗೂ ಪ್ರಾರ್ಥನೆ ನಡೆಯಿತು. ಎಂ.ಐ.ಶರೀಫ್ ಮಲ್ಲೂರು ಸ್ವಾಗತಿಸಿ, ಧನ್ಯವಾದಗೈದರು.