janadhvani

Kannada Online News Paper

ಸಂಘೀ-ದಳಗಳು ‘ಶೌರ್ಯ’ ಮೆರೆಯಲು ಮುಸ್ಲಿಮರೊಂದಿಗೆ ಚೀನಾ ಗಡಿಗೆ ತೆರಳಲಿ- ಕೆ.ಅಶ್ರಫ್

ಶತ್ರು ದೇಶದ ಸೈನಿಕರೊಂದಿಗೆ ಹೋರಾಡಲು ಸಿದ್ಧರಾಗಲಿ. ಸಂಘಿ - ದಳಗಳ ನೇತ್ರತ್ವವನ್ನು ನಮ್ಮ ನೆಚ್ಚಿನ ಹೆಂಗ್ ಪುಂಗ್ಲಿ ಚಕ್ರವರ್ತಿ ಸೂಲಿಬೆಲೆ ವಹಿಸಿ ಕೊಳ್ಳಲಿ. ಇಂದೇ ಗಡಿಗೆ ತೆರಳುವ ದೇಶ ಪ್ರೇಮಿಗಳ ನೋಂದಣಿ ನಡೆಯಲಿ"

ಮಂಗಳೂರು: ರಾಜ್ಯದ ಕಳೆದ ವಿಧಾನಸಭಾ ಜನಾದೇಶದಲ್ಲಿ ಕರ್ನಾಟಕದ ಜನತೆ ಮನುವಾದಿ ಪ್ರಣಾಳಿಕೆಗೆ ತಕ್ಕ ಉತ್ತರ ನೀಡಿದ ನಂತರ ಚಡಪಡಿಸುವ ಸಂಘಿ – ದಳಗಳು ರಾಜ್ಯದ ಉದ್ದಗಲಕ್ಕೆ ಮತೀಯ ಉದ್ವಿಗ್ನ ಸೃಷ್ಟಿಸುವ ಉದ್ದೇಶದಿಂದ ತನ್ನ ನವ ಅಸ್ತ್ರವನ್ನು ತಯಾರಿಸಿ ಶೌರ್ಯ ಯಾತ್ರೆ ಎಂದು ಹೊರಟಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು “ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮುಸ್ಲಿಮರ ವಿರುದ್ಧ ಕೋಮು ದ್ವೇಷ ಕಾರುವ ಬಾಡಿಗೆ ಬಾಷಣ ಕಾರರನ್ನು ಬಳಸಿ ವಿಷ ಕಕ್ಕುವ ಕೆಲಸ ಮಾಡುತ್ತಿದೆ”

“ನಾಡಿನ ಸಹ ಪ್ರಜೆಗಳ ವಿರುದ್ಧವೇ ‘ ಶೌರ್ಯ ‘ ಮೆರೆಯಲು ಹೊರಟಿರುವ ಈ ಸಂಘಿ ದಳಾದಿ ವಿಕ್ರಮರು ನೈಜ ದೇಶ ಪ್ರೇಮಿಗಳಾಗಿದ್ದರೆ ಮತ್ತು ಈ ನಾಡಿನ ಸಹ ಪ್ರಜೆಗಳನ್ನು ದ್ವೇಷಿಸುವುದಿಲ್ಲ ಎಂದಿದ್ದರೆ ಮುಸ್ಲಿಮರ ಜತೆಗೂಡಿ ಈ ದೇಶದ ನೆಲವನ್ನು ಸಂರಕ್ಷಿಸಲು ಚೀನಾ ಗಡಿ ರೇಖೆಗೆ ತೆರಳಿ ಶತ್ರು ದೇಶದ ಸೈನಿಕ ರೊಂದಿಗೆ ಹೋರಾಡಲು ಸಿದ್ಧರಾಗಲಿ. ಸಂಘಿ – ದಳಗಳ ನೇತ್ರತ್ವವನ್ನು ನಮ್ಮ ನೆಚ್ಚಿನ ಹೆಂಗ್ ಪುಂಗ್ಲಿ ಚಕ್ರವರ್ತಿ ಸೂಲಿಬೆಲೆ ವಹಿಸಿ ಕೊಳ್ಳಲಿ. ಇಂದೇ ಗಡಿಗೆ ತೆರಳುವ ದೇಶ ಪ್ರೇಮಿಗಳ ನೋಂದಣಿ ನಡೆಯಲಿ” ಎಂದು ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com