ಸೌದಿ ಅರೇಬಿಯಾ: ಕೆಸಿಎಫ್ ದಮ್ಮಾಮ್ ಝೋನಲ್ ವ್ಯಾಪ್ತಿಯಲ್ಲಿರುವ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ನಡೆದ ರಬೀಅ್-23 ಕಾರ್ಯಕ್ರಮದಲ್ಲಿ
ಸಂಘಟನೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಅನಿವಾಸಿಗಳ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಗುಣಕ್ಕೆ ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ಕೊಡಮಾಡುವ 2023 ನೇ ಸಾಲಿನ ಪ್ರತಿಷ್ಠಿತ “ಓ ಖಾಲಿದ್” ಪ್ರಶಸ್ತಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯ ಅಸ್ರು ಬಜ್ಪೆ ಅವರಿಗೆ ಪ್ರದಾನ ಮಾಡಲಾಯಿತು.
“ವ್ಯಕ್ತಿ ಪರಿಚಯ”
“1997-98 ರ ಆಸುಪಾಸಿನಲ್ಲಿ ಎಸ್ಎಸ್ಎಫ್ ಬಜ್ಪೆ ಯುನಿಟ್‌ಗೆ ಸಾಮಾನ್ಯ ಸದಸ್ಯನಾಗಿ ಸೇರಿಕೊಂಡು ಅಲ್ಪಾವಧಿಯಲ್ಲಿ ಬಜ್ಪೆ ಯುನಿಟ್ ಪ್ರ.ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಅವರ ಸಂಘಟನಾ ಚತುರತೆಗೆ ಎಸ್‌ಎಸ್ಎಫ್‌ನಲ್ಲಿ ವಿವಿಧ ಹುದ್ದೆಗಳು ಹುಡುಕಿಕೊಂಡು ಬಂದವು.
ಸಂಘಟನೆ ಮತ್ತು ಆಶಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದ ಆದರ್ಶ ವ್ಯಕ್ತಿಯಾಗಿ ಗರುತಿಸಿಕೊಂಡ ಅಸ್ರು ಬಜ್ಪೆ ಕೆಸಿಎಫ್ ಪೂರ್ವ ಜಿಕೆಎಸ್‌ಎಫ್ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು.
(ಕೆಸಿಎಫ್ ಫೌಂಡರ್ ಮೆಂಬರ್.)
2013 ರಲ್ಲಿ ಜಿಕೆಎಸ್‌ಎಫ್ ಕೆಸಿಎಫ್ ಎಂದು ಮರು ನಾಮಕರಣ ಪಡೆದ ಅಂದಿನಿಂದ ಇಂದಿನವರೆಗೆ ಕೆಸಿಎಫ್‌ಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಅಸ್ರು ಬಜ್ಪೆ, ಅಲ್ ಹಸ್ಸಾ ಸೆಕ್ಟರ್, ದಮ್ಮಾಮ್ ಝೋನಲ್ ಮತ್ತು ಸೌದಿ ರಾಷ್ಟ್ರೀಯ ಸಮಿತಿಯಲ್ಲಿ ಜವಾಬ್ದಾರಿಯುತ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿರುತ್ತಾರೆ.
ಪ್ರಸ್ತುತ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಸದಸ್ಯರಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ, ರಾಷ್ಟ್ರೀಯ, ಝೋನಲ್ ಮತ್ತು ಸೆಕ್ಟರ್ ನಾಯಕರುಗಳು ಉಪಸ್ಥಿತರಿದ್ದರು.