ಬೆಂಗಳೂರು: ಬಿಜೆಪಿ ನಾಯಕರು ಕ್ಯಾಮೆರಾ ಮುಂದೆ ಮೋದಿ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಹೇಳಿ ಬಡಾಯಿ ಕೊಚ್ಚುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಮೋದಿ ಸರ್ಕಾರದಿಂದ ಜನಸಾಮಾನ್ಯರಿಗೆ ಏನು ಪ್ರಯೋಜನ ಸಿಕ್ಕಿದೆ ಎಂದು ಪ್ರಶ್ನೆ ಎತ್ತಿದರೆ ಸಾಕು.. ಕೂಡಲೇ, ಭಾರತವನ್ನು ವಿದೇಶದಲ್ಲಿ ಮಿಂಚುವಂತೆ ಮಾಡಿದೆ, ಭಾರತಕ್ಕೆ ವಿದೇಶದಲ್ಲಿ ಗೌರವ ಸಿಗುವಂತೆ ಮಾಡಿದೆ ಹಾಗೆ ಮಾಡಿದೆ ಹೀಗೆ ಮಾಡಿದೆ ಎಂಬಿತ್ಯಾದಿ ಸುಳ್ಳುಗಳನ್ನು ಹೇಳಿ ನುಣುಚಿಕೊಳ್ಳುವುದೇ ಇವರ ವಾಡಿಕೆ.
ಇತ್ತೀಚೆಗೆ ಕನ್ನಡ ದೃಶ್ಯ ಮಾಧ್ಯಮ ಬಿಟಿವಿಯಲ್ಲಿ ನಡೆದ ಚರ್ಚೆಯಲ್ಲಿ ನಿರೂಪಕಿ ರಾಧಾ ಹೀರೇಗೌಡರ್ ಅವರು ಇದೇ ರೀತಿಯ ಪ್ರಶ್ನೆಯನ್ನು ಓರ್ವ ಬಿಜೆಪಿ ನಾಯಕರ ಮುಂದಿಟ್ಟರು.
ಬಿಜೆಪಿ: “ಭಾರತವು ಇಂದು ಅಭಿವೃದ್ಧಿಯನ್ನು ಸಾಧಿಸಿದೆ. ಪ್ರಪಂಚದಾದ್ಯಂತ ಭಾರತಕ್ಕೆ ಗೌರವ ಸಿಕ್ಕಿದೆ, ಹಿಂದೆ ವಿದೇಶದಲ್ಲಿ ಭಾರತ ಅಂದರೆ ಕೈಕಟ್ಟಿ ನಿಂತ್ಕೊಳ್ಳುವ ಪರಿಸ್ಥಿತಿ ಇತ್ತು” ಎಂಬಿತ್ಯಾದಿ ಸುಳ್ಳುಗಳನ್ನು ಹೇಳುತ್ತಿದ್ದಂತೆ ಸಿಡಿದೆದ್ದ ರಾಧಕ್ಕ,
ನಿರೂಪಕಿ: “ಏನ್ರೀ ನೀವು ಹೇಳ್ತಿರೋದು? ಯಾವಾಗ ಭಾರತ ತಲೆತಗ್ಗಿಸುವಂತೆ ಮಾಡಿತ್ತು? ಭಾರತವನ್ನು ಅಷ್ಟೊಂದು ಕೀಳಾಗಿ ಕಾಣ್ತಿದ್ದೀರಿ ನೀವು. ನಿಮ್ಮ ಸುಳ್ಳಿನ ಕಂತೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಭಾರತವು ವಿದೇಶದಲ್ಲಿ ಹಿಂದೆಯೂ ಮಿಂಚುತ್ತಿತ್ತು ಇಂದಿಗೂ ಮಿಂಚುತ್ತಿದೆ ಮುಂದೆಗೂ ಮಿಂಚಲಿದೆ. ಬದಲು, ಇದೆಲ್ಲಾ ಮೋದಿಯವರೇ ಮಾಡಿದ್ದು ಎಂದಾದರೆ, ಉದಾಹರಣೆ ಕೊಡಿ” ಎಂದು ಹೇಳಿ ಬಿಜೆಪಿ ನಾಯಕನ ಚಳಿಬಿಡಿಸಿದರು. ಈ ರಂಗದ ವೀಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ್ತಿದೆ.
ಏನೇನೋ ಸುಳ್ಳುಗಳ ಕಂತೆಗಳನ್ನು ಜನ ಸಾಮಾನ್ಯರ ಮುಂದಿಟ್ಟು, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮುಚ್ಚಳು ಶ್ರಮಿಸುತ್ತಿರುವ ಇಂಥಾ ನಾಯಕರನ್ನು ಈ ರೀತಿ ಬಾಯಿ ಮುಚ್ಚಿಸಿದ ರಾಧಕ್ಕನವರು ಜನ ಸಾಮಾನ್ಯರಿಂದ ಶಭಾಷ್ ಗಿರಿ ಗಿಟ್ಟಿಸಿಕೊಂಡಿದ್ದಾರೆ.ಕೆಲವು ಮಾಧ್ಯಮಗಳು, ಬಿಜೆಪಿಯ ಏಜೆಂಟ್ ರಂತೆ ವರ್ತಿಸುತ್ತಿದ್ದು, ಬಿಜೆಪಿ ಲೀಡರ್ಗಳು ಹೇಳುವುದನ್ನೇ ವೇದವಾಕ್ಯವೆಂಬಂತೆ ಬಿತ್ತರಿಸುತ್ತಿರುವ ಸನ್ನಿವೇಶದಲ್ಲಿ, ಬಕೆಟ್ ಮೀಡಿಯಾಗಳು ರಾಧಕ್ಕನವರ ಸಾಮರ್ಥ್ಯವನ್ನು ನೋಡಿ ಕಲಿಯಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.