janadhvani

Kannada Online News Paper

ಕಕ್ಕೆಪದವು ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ವತಿಯಿಂದ ರಂಝಾನ್ ಕಿಟ್ ವಿತರಣೆ.

*_ನಾನು ಹಸಿದಿದ್ದೆ ನೀನು ನನಗ್ಯಾಕೆ ಉಣಿಸಲಿಲ್ಲ” ಇದು ಪರಲೋಕದಲ್ಲಿ ಮಾನವರೊಂದಿಗೆ ಅಲ್ಲಾಹನು ಕೇಳುವ ಪ್ರಶ್ನೆ. ಆಗ ಮಾನವ ಕೇಳುತ್ತಾನೆ, ಓ ಪ್ರಭು,  ನೀನು ಅನ್ನದಾತ , ನಾನು ನಿನಗೆ ಅದೇಗೆ ಉಣಿಸಲಿ. ಆಗ ಅಲ್ಲಾಹನು, ನನ್ನ ಇಂತಿಂತಹ ದಾಸನು ಹಸಿವಿನಿಂದ ಇರುವಾಗ ಅವನಿಗೆ ನೀನು ಉಣಿಸಿದ್ದರೆ ಅದು ನನಗೆ ಉಣಿಸಿದಂತಾಗುತ್ತಿತ್ತು” ಎನ್ನುವನು._*(ಬುಖಾರಿ, ಮುಸ್ಲಿಮ್)

_”ಬಡವರಿಗೆ ನೀಡುವ ಆಹಾರ ಅದು ಅಲ್ಲಾಹನಿಗೆ ನೀಡಿದಂತೆ.” ಎಂಬ ಮಹತ್ವದ ವಚನದೊಂದಿಗೆ ಕಕ್ಕೆಪದವಿನ ಬಡಜನರಿಗೆ ಆಶಾಕಿರಣವಾಗಿ ಗ್ರೂಪ್ ಅಡ್ಮಿನ್ ಗಳಾದ ಅನ್ವರ್ ಮಜ್ಜಿಗುಡ್ಡೆ, ಕಲಂದರ್ ಶರೀಫ್ ಕಕ್ಕೆಪದವು, ಸ್ವಾದಿಕ್ ಸಖಾಫಿ ಪೇರಲಗುಳಿ, ಅಶ್ರಫ್ ಕಟ್ಟದಪಡ್ಪು ಹಾಗೂ ಅಝೀಝ್ ಕುಞ್ಞಲಿಕೆ, ರವರ ಕಾರ್ಯಚರಣೆಯ ಫಲವಾಗಿ ಮತ್ತು ಉದಾತ್ತ ದಾನಿಗಳಾದ ಗ್ರೂಪ್‌ ಸದಸ್ಯರ ಸಹಕಾರದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ವತಿಯಿಂದ ರಂಝಾನ್ ತಿಂಗಳ ಪ್ರಯುಕ್ತ ಕಕ್ಕೆಪದವಿನ ಪರಿಸರದಲ್ಲಿರುವ ಆಯ್ದ ಹತ್ತು ಕುಟುಂಬಕ್ಕೆ ರಂಝಾನ್ ಕಿಟ್ ವಿತರಿಸಲಾಯಿತು, ಪ್ರಸ್ತುತ ಕಾರ್ಯಕ್ರಮ ದಲ್ಲಿ ಸ್ಥಳೀಯ ಖತೀಬ್ ಉಸ್ತಾದ್ ಅಬ್ದುಲ್ ಖಾದಿರ್ ಖಾಮಿಲ್ ಸಖಾಫಿ ದುಹಾಃ ನೇತೃತ್ವ ವಹಿಸಿದರು, ಸ್ಥಳೀಯ ಮಸ್ಜಿದ್ ಅಡಳಿತ ಮಂಡಳಿಯ ಕೋಶಾಧಿಕಾರಿ ಇಸ್ಹಾಕ್ ಗಂಪತ್ತಡ್ಡ ರವರು ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿದರು,ನಂತರ ಮಾತನಾಡಿದ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ನ ಸಹ ಅಡ್ಮಿನ್ ಸ್ವಾದಿಕ್ ಸಖಾಫಿ ಪೇರಲಗುಳಿ ಯವರು ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ನ ಸದಸ್ಯರ ಬಗ್ಗೆ ಮಾತಾನಾಡಿ ಬಡವರ ಕಣ್ಣೀರು ಒರೆಸುವ ಕಾರ್ಯಕ್ಕೆ ಸ್ಪಂದಿಸುವುದನ್ನು ಬಹಳ ಸ್ಪಷ್ಟವಾಗಿ ವಿವರಿಸಿದರು, ಬಳಿಕ ಮಾತಾನಾಡಿದ ಸ್ಥಳೀಯ ಖತೀಬ್ ಉಸ್ತಾದ್ ನಾವು ಬಡವರಿಗೆ ಒಂದು ಹೊತ್ತಿನ ಅನ್ನವನ್ನು ನೀಡಿದರೆ ಅಲ್ಲಾಹನು ನಮಗೆ ಹತ್ತು ಹೊತ್ತಿನ ಅನ್ನವನ್ನು ನೀಡುವನು, ಭೂಮಿಯ ಮೇಲಿರುವವರ ಮೇಲೆ ಕರುಣೆ ತೋರಿದರೆ ಅಲ್ಲಾಹನು ನಿಮ್ಮ ಮೇಲೆ ಕರುಣೆ ತೋರುವನು, ಬಡವರಿಗೆ ಸಹಾಯ ಹಸ್ತ ನೀಡಿದರಿಂದ ಅದರಿಂದ ದೊರಕುವ ಮಹತ್ವವನ್ನು ಬಹಳ ಸಂಕ್ಷಿಪ್ತವಾಗಿ ವಿವರಿಸಿ ದುಹಾಃ ಗೈದರು, ಪ್ರಸ್ತುತ ಕಾರ್ಯಕ್ರಮ ದಲ್ಲಿ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ಸಹ ಅಡ್ಮಿನ್ ಗಳಾದ ಅಬ್ದುಲ್ ಅಝೀಝ್ ಕುಞ್ಞಲಿಕೆ, ಅಶ್ರಫ್ ಕಟ್ಟದಪಡ್ಪು, ಹಾಗೂ ಸ್ಥಳೀಯ ಮಸ್ಜಿದ್ ಕಾರ್ಯದರ್ಶಿ ಸಮದ್ ಕರ್ಲ, RCFI Supervisor ತಸ್ಲೀಂ ಸಖಾಫಿ ಗಂಪತ್ತಡ್ಡ, ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ಕೊಡುಗೈ ದಾನಿ ಹಮೀದ್ ಪಡಿಲ್ ಬೆಟ್ಟು, ಯಾಅಕೂಬ್ ಮುಸ್ಲಿಯಾರ್ ಮಲ್ಲಸ್ ಗುಡ್ಡೆ, ಹಾಗೂ ಇನ್ನಿತ ಹಲವಾರು ಸದಸ್ಯರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com