janadhvani

Kannada Online News Paper

ಕೆಸಿಎಫ್ ದುಬೈ ಸೌತ್ ಝೋನ್ ಸಮಿತಿಯ ವಾರ್ಷಿಕ ಮಹಾಸಭೆ

ದುಬೈ:(ಜನಧ್ವನಿ ವಾರ್ತೆ) ಅನಿವಾಸಿ ಸುನ್ನೀ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ದುಬೈ ಸೌತ್ ಝೋನ್ ಸಮಿತಿಯ ವಾರ್ಷಿಕ ಮಹಾಸಭೆಯು ಮೇ 11 ಶುಕ್ರವಾರದಂದು ಕೆಸಿಎಫ್ ದುಬೈ ಸೌತ್ ಝೋನ್ ಕಛೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಝೋನ್ ಸಮಿತಿಯ ಅದ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ ವಹಿಸಿದ್ದರು. ಝೋನ್ ಸಮಿತಿಯ ಶಿಕ್ಷಣ ವಿಭಾಗದ ಅಧ್ಯಕ್ಷರಾಗಿದ್ದ ಶಾಹುಲ್ ಹಮೀದ್ ಸಖಾಫಿ ದುವಾ ನೆರವೇರಿಸಿದರು. ಸಭೆಯನ್ನು ಮೊಹಮ್ಮದ್ ಅಲಿ ಫೈಝಿಯವರು ಉದ್ಘಾಟಿಸಿದರು. ಮಹಾ ಸಭೆಗೆ ಆಗಮಿಸಿದಂತಹ ರಾಷ್ಟ್ರೀಯ ನಾಯಕರನ್ನು ಅಹ್ಮದ್ ಶರೀಪ್ ಹೊಸ್ಮಾರ್ ಸ್ವಾಗತಿಸಿದರು.


ಈ ವಾರ್ಷಿಕ ಮಹಾ ಸಭೆಯಲ್ಲಿ ಹಿಂದಿನ ಒಂದು ವರ್ಷದ ಝೋನ್ ಸಮಿತಿಯ ಎಲ್ಲಾ ವಿಭಾಗದ ಸಂಪೂರ್ಣ ವಾರ್ಷಿಕ ವರದಿಯನ್ನು ಮಂಡಿಸಲಾಯಿತು.
ಶಿಕ್ಷಣ ವಿಭಾಗದ ವರದಿಯನ್ನು ಶಾಹುಲ್ ಹಮೀದ್ ಸಖಾಫಿ, ಸಂಘಟನಾ ವಿಭಾಗದ ವರದಿ ಅಬ್ದುಲ್ ರಹಿಮಾನ್ ಉಳ್ಳಾಲ, ವೆಲ್ಫೇರ್ ವಿಭಾಗದ ವರದಿ ಶರೀಫ್ ಬೈರಿಕಟ್ಟೆ, ಪಬ್ಲಿಕೇಷನ್ ವಿಭಾಗದ ವರದಿ ಮುಹಮ್ಮದ್ ಅಲಿ‌ ಕನ್ಯಾನ, ಕಛೇರಿ ನಿರ್ವಹಣೆ ವಿಭಾಗದ ವರದಿಯನ್ನು ಜಮಾಲ್ ಸುಳ್ಯ ಹಾಗೂ ಝೋನ್ ಸಮಿತಿಯ ಸಂಪೂರ್ಣವಾದ ವರದಿಯನ್ನು ಝೋನ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ರಫೀಕ್ ಕಲ್ಲಡ್ಕರವರು ಮಂಡಿಸಿದರು.


ಇದೇ ಸಂಧರ್ಭದಲ್ಲಿ ಸಮಿತಿಯ ವಾರ್ಷಿಕ ಮಹಾ ಸಭೆಯಲ್ಲಿ ಬಾಗವಹಿಸಿದ ಯುಎಇ ರಾಷ್ಟೀಯ ಸಮಿತಿಯ ಅಧ್ಯಕ್ಷರಾದ ಹಮೀದ್ ಸ’ಅದಿಯವರು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸಂಘಟನಾ ತರಗತಿಯನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಿಕೊಟ್ಟರು.
ಯುಎಇ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಕಾಜೂರು ಡಿವಿಷನ್ ವಿಭಾಗದಲ್ಲಿನ ಬದಲಾವಣೆಯ ಕುರಿತಾಗಿ ವಿವರಿಸಿದರು.
ಅದೇ ರೀತಿ ಯುಎಇ ರಾಷ್ಟ್ರೀಯ ಸಮಿತಿಯ ಸಂಘಟನಾ ಕನ್ವೀನರ್ ಕೆ.ಎಚ್ ಮೊಹಮ್ಮದ್ ಸಖಾಫಿಯು ಸಂಘಟನೆಯ ಮುಂದಿನ ಯೋಜನೆಗಳ ಕುರಿತಾಗಿ ಕಾರ್ಯಕರ್ತರ ನಡುವೆ ಚರ್ಚೆ ಹಾಗೂ ಕಾರ್ಯಕರ್ತರಿಂದ ಮುಂದಿನ ಕಾರ್ಯಚಟುವಟಿಕೆಗಳಲ್ಲಿನ ಬದಲಾವಣೆಗಳ ಕುರಿತಾಗಿ ಸಲಹೆಗಳನ್ನು ಕೇಳಿ ಪಡೆದುಕೊಂಡರು.
ಸಭೆಯಲ್ಲಿ ರಾಷ್ಟ್ರೀಯ ನಾಯಕರಾದ ನಝೀರ್ ಹಾಜಿ ಕೆಮ್ಮಾರ ಹಾಗೂ ಅಬ್ದುಲ್ ಶುಕೂರ್ ಮಾಣಿಲ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೆಸಿಎಫ್ ದುಬೈ ಸೌತ್ ಝೋನ್ 2018 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅದ್ಯಕ್ಷರು: ಅಬ್ದುಲ್ ಅಝೀಝ್ ಅಹ್ಸನಿ.
ಪ್ರಧಾನ ಕಾರ್ಯದರ್ಶಿ: ರಫೀಕ್ ಕಲ್ಲಡ್ಕ.
ಕೋಶಾಧಿಕಾರಿ: ನಝೀರ್ ಹಾಜಿ ಕೆಮ್ಮಾರ.
ನೋಲೆಜ್ ವಿಭಾಗ;
ಅಧ್ಯಕ್ಷರು: ಶಾಹುಲ್ ಹಮೀದ್ ಸಖಾಫಿ
ಕನ್ವೀನರ್: ಇಮ್ತಿಯಾಝ್ ಬೈರಿಕಟ್ಟೆ.
ಸಂಘಟನಾ ವಿಭಾಗ;
ಅಧ್ಯಕ್ಷರು: ಅಹ್ಮದ್ ಶರೀಫ್ ಹೊಸ್ಮಾರ್
ಕನ್ವೀನರ್: ಅಬ್ದುಲ್ ರಹ್ಮಾನ್ ಉಳ್ಳಾಲ.
ವೆಲ್ಫೇರ್ ವಿಭಾಗ;
ಅಧ್ಯಕ್ಷರು: ಶರೀಫ್ ಬೈರಿಕಟ್ಟೆ.
ಕನ್ವೀನರ್: ಅಬ್ದುಲ್ ಅಝೀಝ್ ಕೆದಿಲ
ಆಡಳಿತ ವಿಭಾಗ;
ಅದ್ಯಕ್ಷರು: ಶರೀಫ್ ಪಡೀಲ್.
ಕನ್ವೀನರ್: ರಿಯಾಝ್ ವೆನೂರ್.
ಪಬ್ಲಿಕೇಷನ್ ವಿಭಾಗ;
ಅಧ್ಯಕ್ಷರು: ಮುಹಮ್ಮದ್ ಅಲಿ ಕನ್ಯಾನ.
ಕನ್ವೀನರ್: ಜಮಾಲ್ ಸುಳ್ಯ.
ಇಹ್ಸಾನ್ ವಿಭಾಗ;
ಅದ್ಯಕ್ಷರು: ಮೊಹಮ್ಮದ್ ಫೈಝಿ ಸುರಿಬೈಲ್
ಕನ್ವೀನರ್: ಶರೀಫ್ ದೇರಳಕಟ್ಟೆ.

ಸಭೆಯ ಕೊನೆಯಲ್ಲಿ ಇಲ್ಯಾಸ್ ಮದನಿ ಬರ್ಷ ಉಸ್ತಾದರು ದುವಾ ನೆರವೇರಿಸಿ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ ಅಝೀಝ್ ಕೆದಿಲ ಧನ್ಯವಾದ ಸಮರ್ಪಿಸಿ ಮೂರು ಸ್ವಲಾತಿನೊಂದಿಗೆ ಕೆಸಿಎಫ್ ದುಬೈ ಸೌತ್ ಝೊನ್ ಮಹಾಸಭೆಯು ಮುಕ್ತಾಯಗೊಂಡಿತು.

error: Content is protected !! Not allowed copy content from janadhvani.com