janadhvani

Kannada Online News Paper

ಕೆಸಿಎಫ್ ದುಬೈ ನಾರ್ತ್ ಝೋನ್- ಸೆಪ್ಟೆಂಬರ್ 30 ರಂದು ಗ್ರ್ಯಾಂಡ್ ಮೀಲಾದ್ ಸಮಾವೇಶ

ಸಂಜೆ 5. 30ಕ್ಕೆ ದುಬೈ ಕಿಸೈಸ್ ಮೆಟ್ರೋ ಹತ್ತಿರವಿರುವ ಅಲ್ ಸಾದಿಕ್ ಇಸ್ಲಾಮಿಕ್ ಇಂಗ್ಲಿಷ್ ಸ್ಕೂಲ್ ಸಂಭಾಂಗಣದಲ್ಲಿ ನಡೆಯಲಿದೆ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದುಬೈ ನಾರ್ತ್ ಝೋನ್ ಆಶ್ರಯದಲ್ಲಿ “ಜಗತ್ತಿಗೆ ಕರುಣೆಯ ಪ್ರವಾದಿ ﷺ ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶ ಸೆಪ್ಟೆಂಬರ್ 30 ರಂದು ಸಂಜೆ 5. 30ಕ್ಕೆ ದುಬೈ ಕಿಸೈಸ್ ಮೆಟ್ರೋ ಹತ್ತಿರವಿರುವ ಅಲ್ ಸಾದಿಕ್ ಇಸ್ಲಾಮಿಕ್ ಇಂಗ್ಲಿಷ್ ಸ್ಕೂಲ್ ಸಂಭಾಂಗಣದಲ್ಲಿ ನಡೆಯಲಿದೆ.

ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಸಯ್ಯದ್ ಖಲೀಲ್ ಬುಖಾರಿ ತಂಙ್ಞಳ್ ದುಆ ನೇತೃತ್ವವನ್ನು ನೀಡಲಿದ್ದು, ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಇಜಲೀಲ್ ನಿಝಾಮಿ ಎಮ್ಮೆಮಾಡು ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಖ್ಯಾತ ಬಹುಭಾಷಾ ವಾಗ್ಮಿ ಮೌಲಾನಾ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.

ಉಡುಪಿ ಜಿಲ್ಲಾ ಎನ್ ಆರ್ ಐ ಫಾರಂ ಕಾಂಗ್ರೆಸ್ ಅಧ್ಯಕ್ಷರಾದ ಜನಾಬ್ ಯುಎಸ್ ವಾಹಿದ್ ದಾವೂದ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಜಮಾಲ್ ಅಲ್ ಸಾಲೇ ಅಲ್ ಶಮ್ಸ್ (ಆರ್ಮಿ ಯೂನಿಫಾರ್ಮ್ ಕಂಪನಿ), ಜನಾಬ್ ಜನ್ಸಾರ್ ಈಪಿ (ನೂರ್ ಅಲ್ ಹಯಾತ್ ಗ್ರೂಪ್), ಜನಾಬ್ ಅಬೂಸ್ವಾಲಿಹ್ (ನಫೀಸ್ ಗ್ರೂಪ್) ಸೇರಿದಂತೆ ದುಬೈಯಲ್ಲಿರುವ ಪ್ರಮುಖ ಉದ್ಯಮಿಗಳು ಭಾಗವಹಿಸಲಿದ್ದಾರೆ.

ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಿಎಂಹೆಚ್ ಹಮೀದ್ ಈಶ್ವರಮಂಗಿಲ, ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ, ಕೆಸಿಎಫ್ ಯುಎಇ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ, ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ, ಕೆಸಿಎಫ್ ದುಬೈ ನಾರ್ತ್ಶ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ, ಅಶ್ರಫ್ ಹಾಜಿ ಅಡ್ಯಾರ್, ಜನಾಬ್ ರಶೀದ್ ಕೈಕಂಬ ಸೇರಿದಂತೆ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಖ್ಯಾತ ಗಾಯಕರಾದ ಅರ್ಶಕ್ ಪಾನೂರ್ ನೇತೃತ್ವದಲ್ಲಿ ನಾತ್ ಮತ್ತು ಬುರ್ದಾ ಆಲಾಪನೆ, ಮೌಲೂದ್ ಪಾರಾಯಣ, ಆಕರ್ಷಣೀಯ ದಫ್ಫ್ ಪ್ರದರ್ಶನ, ಕವಾಲಿ ಆಲಾಪನೆ, ಸನ್ಮಾನ ಸಮಾರಂಭ ನಡೆಯಲಿದೆ.

error: Content is protected !! Not allowed copy content from janadhvani.com