ರಿಯಾದ್: ಸೌದಿ ಅರೇಬಿಯಾದಲ್ಲಿ ಮೊಬೈಲ್ ಫೋನ್ ಕರೆ ಮಾಡುವವರ ಹೆಸರನ್ನು ಗುರುತಿಸುವ ವ್ಯವಸ್ಥೆ ಆರಂಭವಾಗಿದೆ. ಅಕ್ಟೋಬರ್ 1ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಂವಹನ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಆಯೋಗ ಮಾಹಿತಿ ನೀಡಿದೆ. ಹೊಸ ವ್ಯವಸ್ಥೆಯು ನಕಲಿ ಫೋನ್ ಕರೆಗಳ ಮೂಲಕ ವಂಚನೆಯನ್ನು ತಡೆಗಟ್ಟುವ ಭಾಗವಾಗಿದೆ.
ತಿಂಗಳ ಹಿಂದೆ ಸೌದಿ ಸಂವಹನ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಆಯೋಗ ಘೋಷಿಸಿದ್ದ ವ್ಯವಸ್ಥೆ ಇದೀಗ ಜಾರಿಗೆ ಬರಲಿದೆ. ಹೊಸ ವ್ಯವಸ್ಥೆಯು ಕರೆ ಸ್ವೀಕರಿಸುವವರಿಗೆ ಮೊಬೈಲ್ ಫೋನ್ ಕರೆ ಮಾಡುವವರ ಹೆಸರನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಅಕ್ಟೋಬರ್ 1ರ ಭಾನುವಾರದಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಆಯೋಗ ತಿಳಿಸಿದೆ.
ಅಲ್ಲದೆ ಬಳಕೆದಾರರು ಸ್ವೀಕರಿಸಿದ ಕರೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು. ನಕಲಿ ಕರೆಗಳ ಮೂಲಕ ವಂಚನೆಯನ್ನು ತಡೆಯುವ ಉದ್ದೇಶದಿಂದ ಕೂಡ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಹೊಸ ವ್ಯವಸ್ಥೆ ಜಾರಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಇದಕ್ಕಾಗಿ ಸುಧಾರಿತ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತದೆ.