ಅಬುಧಾಬಿ: ಒಮಾನ್ನಿಂದ ಯುಎಇಗೆ ಮುವಾಸಲಾತ್ ಬಸ್ ಸೇವೆಗಳ ಪುನರಾರಂಭ. ಅಕ್ಟೋಬರ್ 1ರಿಂದ ಸೇವೆ ಆರಂಭವಾಗಲಿದೆ. ಅಲ್ ಐನ್ ಮೂಲಕ ಅಬುಧಾಬಿಗೆ ಬಸ್ ಸೇವೆ ಇರಲಿದೆ.
ಒನ್ ವೇ ಟಿಕೆಟ್ ದರ 11.5 ಒಮಾನಿ ರಿಯಾಲ್ ಆಗಿರುತ್ತದೆ. ಪ್ರಯಾಣಿಕರಿಗೆ 23 ಕೆಜಿ ಬ್ಯಾಗೇಜ್ ಮತ್ತು 7 ಕೆಜಿ ಕೈ ಸಾಮಾನುಗಳನ್ನು ಅನುಮತಿಸಲಾಗುವುದು. ಬಸ್ ಅಸೈಬಾ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಕ್ಕೆ ಹೊರಟು 11 ಗಂಟೆಗೆ ಬುರೈಮಿ, ಮಧ್ಯಾಹ್ನ 1 ಗಂಟೆಗೆ ಅಲ್ ಐನ್ ಮತ್ತು ಮಧ್ಯಾಹ್ನ 3.40 ಕ್ಕೆ ಅಬುಧಾಬಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತದೆ. ಬಸ್ ಅಬುಧಾಬಿಯಿಂದ ಬೆಳಗ್ಗೆ 10.40ಕ್ಕೆ ಹೊರಟು, ರಾತ್ರಿ 8.35ಕ್ಕೆ ಮಸ್ಕತ್ ತಲುಪಲಿದೆ.
ಕೋವಿಡ್ನಿಂದಾಗಿ ಮುವಾಸ್ಸಲಾತ್ ಯುಎಇಗೆ ಬಸ್ ಸೇವೆಗಳನ್ನು ನಿಲ್ಲಿಸಲಾಗಿತ್ತು. ಈಗ ಮರುಪ್ರಾರಂಭಿಸಲಾಗುತ್ತಿದೆ. ಈ ನಿರ್ಧಾರವು ನಿಯಮಿತವಾಗಿ ಮಸ್ಕತ್ಗೆ ಪ್ರಯಾಣಿಸುವ ವ್ಯಾಪಾರಿಗಳು ಮತ್ತು ಇತರರಿಗೆ ಪ್ರಯೋಜನಕಾರಿಯಾಗಿದೆ.
ಅಬುಧಾಬಿಯಿಂದ ಮಸ್ಕತ್ಗೆ ಪ್ರಯಾಣದ ಸಮಯ ಐದು ಗಂಟೆಗಳು. ಇಮಿಗ್ರೇಷನ್ ಕ್ಲಿಯರೆನ್ಸ್ ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ ಸೇರಿದಂತೆ ಆರು ಗಂಟೆಗಳಲ್ಲಿ ಮಸ್ಕತ್ ತಲುಪಲಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ