ವಿಟ್ಲ: ಮರ್ಹಬಾ ಕಮ್ಯೂನಿಟಿ ಟ್ರಸ್ಟ್ MCT ಕೊಡಂಗಾಯಿ ಇದರ ನೂತನ ಕಛೇರಿಯನ್ನು ಕೊಡಂಗಾಯಿ ಹೃದಯ ಭಾಗದಲ್ಲಿ ಊರ – ಪರವೂರ ಅತಿಥಿಗಳ ಸಮ್ಮುಖದಲ್ಲಿ ಸ್ಥಳೀಯ ಖತೀಬ್ ಬಹುಮಾನ್ಯ ಬಿ ಎ ಸಿದ್ದೀಕ್ ಅರ್ಶದಿ ಉಸ್ತಾದರು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಎ ಎಂ ಮಹಮ್ಮದ್ ಕುಂಞ ವಹಿಸಿದ್ದರು, ಅಂಚು ಕೊಡಂಗಾಯಿ ಸ್ವಾಗತಿಸಿದರು.
ಸಾರ್ವಜನಿಕ ಸೇವೆಗಾಗಿ ಹಲವಾರು ಪದ್ಧತಿಗಳನ್ನು ರೂಪಿಸಿ ಕಾರ್ಯಾಚರಿಸುತ್ತಿರುವ MCT ನಡೆಗೆ ರವೀಶ್ ಶೆಟ್ಟಿ ಕರ್ಕಳ, ಸಂದೇಶ್ ಶೆಟ್ಟಿ ಬಿಕ್ನಾಜೆ, ಹಾಜಿ ಹಮೀದ್ ಕೊಡಂಗಾಯಿ ಮತ್ತು ಹಕೀಮ್ ಪರ್ತಿಪ್ಪಾಡಿ ಶುಭ ಹಾರೈಸಿದರು.
ವಿಶೇಷವಾಗಿ ಸಂಘಟನೆಗೆ ಶಕ್ತಿ ತುಂಬುವ ಅಬ್ದುಲ್ ರಝಾಕ್ ಎಂ ಕೆ ಮತ್ತು ಅಶ್ರಫ್ ಎಬಿ (ಉಮ್ಮಿ) ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ನಾಸೀರ್ ಕಡಂಬು, ಅಲಿ ಕಡಂಬು, ಡಾಕ್ಟರ್ ಹಸೈನಾರ್ ಹೆಚ್ಎಮ್, ಹಕೀಮ್ ಎಂ, ಮಹಮ್ಮದ್ ಸಿ ಎಚ್, ಹಮೀದ್ ಟಿ, ಇರ್ಶಾದ್ ಇಂಜಿನಿಯರ್, ಮಜೀದ್ ಟಿ ಎಂ, ಅಬ್ದುಲ್ ಕುಂಞಿ, ನೂರುದ್ದೀನ್ ಕೆ, ರಫೀಕ್ ಪಿ, ಅಶ್ರಫ್ ಎಬಿ, ಹಾರಿಸ್ ಆರ್ಸಿಕೆ, ಆಸೀಸ್ ಕೆ, ಮಜೀದ್ ದೀಪಕ್ ಮುಂತಾದ ಹಲವಾರು ಗಣ್ಯರು ಮತ್ತು ಕಮಿಟಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ನಿಯಾಝ್ ಎಂ ಕೆ ಧನ್ಯವಾದವಿತ್ತರು.
ಧಾರ್ಮಿಕ, ಸಾಮಾಜಿಕ, ಜನಸೇವಾ ಕರ್ಮರಂಗದಲ್ಲಿ ಸದಾ ಮುಂಚೂಣಿಯಲ್ಲಿರುವ
“ಕೊಡಂಗಾಯಿ” ಪ್ರಕೃತಿ ರಮಣೀಯತೆಗೆ ಹೆಸರಾಗಿರುವ ಹಾಗೆಯೇ ಸಾಂಘಿಕ ಚಟುವಟಿಕೆಗಳಿಗೂ ಹೆಸರುವಾಸಿ.
ಅನೇಕ ಬಡ – ನಿರ್ಗತಿಕ ಕುಟುಂಬಗಳ ಕಷ್ಟಗಳ ಬೇಗೆಗೆ ಸಹಾಯದ ತಣ್ಣೀರ ಸಿಂಚನ ನೀಡಿ ಅವರ ಆತ್ಮಾರ್ಥ ಪ್ರಾರ್ಥನೆ ಹಾಗೂ ಶ್ಲಾಘನೆಗೆ ಪಾತ್ರವಾದ, ಸಮಾಜ ಸೇವೆಯಲ್ಲಿ ಸನ್ನಧ್ಧ ಸೈನಿಕರಾಗಿ ಕ್ರಿಯಾಶೀಲ ರಾಗಿರುವ ಯುವ ಪಡೆ ಮರ್ಹಬಾ ಕಮ್ಯೂನಿಟಿ ಟ್ರಸ್ಟ್ MCT ಕೊಡಂಗಾಯಿ.
(✒️ರಮೀಝ್ ಎಂ ಕೆ ತಾಯಿಫ್)