ಶಾರ್ಜಾ: ಪ್ರವಾದಿ ﷺ ರವರ ಜನ್ಮ ದಿನಾಚರಣೆ ನಿಮಿತ್ತ ಶಾರ್ಜಾದಲ್ಲಿ ರಜೆ ಘೋಷಿಸಲಾಗಿದೆ. ಸೆಪ್ಟೆಂಬರ್ 28 ಗುರುವಾರ ಸರ್ಕಾರಿ ವಲಯದ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಎಂದು ಶಾರ್ಜಾ ಸರ್ಕಾರ ಘೋಷಿಸಿದೆ.
ವಾರಾಂತ್ಯದ ರಜಾದಿನಗಳು ಸೇರಿದಂತೆ, ಶಾರ್ಜಾದಲ್ಲಿನ ಸರ್ಕಾರಿ ನೌಕರರು ಒಟ್ಟು ನಾಲ್ಕು ದಿನಗಳ ರಜೆಯನ್ನು ಪಡೆಯಲಿದ್ದಾರೆ. ಸೋಮವಾರ, ಅಕ್ಟೋಬರ್ 2 ರಂದು ಕೆಲಸದ ದಿನಗಳು ಪುನರಾರಂಭಗೊಳ್ಳುತ್ತವೆ. ಯುಎಇಯ ಇತರ ಎಮಿರೇಟ್‌ಗಳು ಸೆಪ್ಟೆಂಬರ್ 29 ಶುಕ್ರವಾರದಂದು ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಜೆ ಘೋಷಿಸಿವೆ.
ಒಮಾನ್ ನಲ್ಲಿ ಸೆ.28 ರಂದು ಸಾರ್ವಜನಿಕ ರಜೆ
ಪ್ರವಾದಿ ﷺ ರವರ ಜನ್ಮ ದಿನದ ಅಂಗವಾಗಿ ಒಮಾನ್‌ನಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.ಸೆಪ್ಟೆಂಬರ್ 28 ರ ಗುರುವಾರ ದೇಶದಲ್ಲಿ ಸಾರ್ವಜನಿಕ ರಜಾದಿನವಾಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಜೆಯು ಸರ್ಕಾರಿ ಮತ್ತು ಖಾಸಗಿ ವಲಯಗಳೆರಡಕ್ಕೂ ಅನ್ವಯಿಸಲಿದೆ.