ಪಡುಬಿದ್ರಿ : ಆ 26: ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿಯ ಭಾಗವಾಗಿ ರಾಜ್ಯದಾದ್ಯಂತ ನಡೆಯುತ್ತಿರುವ ಪೀಪಲ್ಸ್ ಕಾನ್ಫರೆನ್ಸ್ ಎಸ್ಸೆಸ್ಸೆಫ್ ಎನ್.ಎಸ್ ರೋಡ್, ಎಸ್.ಎಸ್ ರೋಡ್, ಬಸ್ತಿಪಡ್ಪು, ಕಣ್ಣಂಗಾರ್, ಹೆಜಮಾಡಿ ಕೋಡಿ ಶಾಖೆಗಳ ಜಂಟಿಯಲ್ಲಿ ಆಗಸ್ಟ್ 27 ರಂದು ಸಂಜೆ 4.30 ಕ್ಕೆ ಹೆಜಮಾಡಿ ಜಂಕ್ಷನಲ್ಲಿ ನಡೆಯಲಿದೆ.
ಮುಖ್ಯ ಪ್ರಭಾಷಣವನ್ನ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಹಾಫಿಝ್ ಸುಫಿಯಾನ್ ಸಖಾಫಿ ಮಾಡಲಿದ್ದಾರೆ. ಕೇಂದ್ರ ಮಸ್ಜಿದ್ ಮುದರ್ರಿಸರಾದ ಅಶ್ರಫ್ ಸಖಾಫಿ ಕಿನ್ಯ ರವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ SI ಪಡುಬಿದ್ರಿ ಪೊಲೀಸ್ ಠಾಣೆ ಪ್ರಸನ್ನ ಎಂ.ಎಸ್ ಭಾಗವಹಿಸಲಿದ್ದಾರೆ.
ನಿವೃತ್ತ ಸೈನ್ಯಾಧಿಕಾರಿ ಮೊಯ್ದಿನ್ ಪಡುಬಿದ್ರಿ ಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು. ರೈಂಬೋ ವಿದ್ಯಾರ್ಥಿಗಳ ಆಕರ್ಷಕ ಸೈಕಲ್ ರ್ಯ್ಯಾಲಿ ಹಾಗೂ ಗೋಲ್ಡನ್ ಟೀ ಹಟ್ ಗಮನಸೆಲೆಯಲಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.