janadhvani

Kannada Online News Paper

ಬಂಟ್ವಾಳ: ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣಾ ಶಿಬಿರ

ಬಂಟ್ವಾಳ: ರೋಟರಿ ಕ್ಲಬ್ ಮೊಡಂಕಾಪು,
ಎಮರ್ಜೆನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್(ರಿ) ದ. ಕ ಕರ್ನಾಟಕ, ಆನಂದಾಶ್ರಮ ಸೇವಾ ಟ್ರಸ್ಟ್(ರಿ) ಪುತ್ತೂರು, ದ.ಕ ಜಿಲ್ಲಾ ಸಂಚಾರಿ ನೇತ್ರ ಘಟಕ ಜಿಲ್ಲಾ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಬಂಟ್ವಾಳದ ಮೊಡಂಕಾಪು ಚರ್ಚ್ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣ ಪರೀಕ್ಷೆ ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರವು ಆ.22 ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಶಿಬಿರದಲ್ಲಿ 300 ಫಲಾನುಭವಿಗಳು ಭಾಗವಹಿಸಿದ್ದು 260 ಜನರಿಗೆ ಕನ್ನಡಕ ವಿತರಿಸಲಾಯಿತು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ವೆದ್ಯರ ಸಲಹೆಮೇರೆಗೆ ಜಿಲ್ಲೆಯ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮೊಡಂಕಾಪು ಅಧ್ಯಕರಾದ ರಹೀಮ್ ಬಿಸಿರೋಡ್ ವಹಿಸಿದರು. ವೇದಿಕೆಯಲ್ಲಿ ಎಮರ್ಜನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್(ರಿ) ಉಪಾಧ್ಯಕ್ಷರಾದ ಇಬ್ರಾಹಿಂ ನಂದಾವರ, ಸದಸ್ಯರಾದ ಅಶ್ಫಕ್ ಉಳ್ಳಾಲ, ಅಲೆಕ್ಷಾಂಡರ್ ಲೋಬೊ(navy defence),commander ಪಿ ವಸಂತ್ ರಾವ್(Retired navy defence), ಅನಿಲ್ ರಾಮಾನಂಜಮ್(Eye specialist), Dr ಶಾಂತರಾಜ್(Eye specialist), ಪಿ ಗೌರಿ (ಆನಂದಾಶ್ರಮ ಸೇವಾ ಟ್ರಸ್ಟ್) ಹಾಗೂ ಇತರ ಗಣ್ಯ ಅಥಿತಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮೊಡಂಕಾಪು ಇದರ ನೂತನ ಅಧ್ಯಕ್ಷರಾದ ರಹೀಮ್ ಬಿಸಿರೋಡ್ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಬದ್ರುದ್ದೀನ್ ಉಳ್ಳಾಲ ರವರ ನೇತೃತ್ವದಲ್ಲಿ ಸ್ಮರಣಿಕೆ ಮತ್ತು ಶಾಲು ಹೊದಿಸುವ ಮೂಲಕ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯ ನಿರ್ವಾಹಕರಾದ ಶಮೀರ್ ಕೆ. ಎಚ್, ಇಬ್ರಾಹಿಂ ನಂದಾವರ, ಅಲ್ತಾಫ್ ಟಿಪ್ಪು ನಗರ, ಶಾಹುಲ್ BCR, ಆಶಿಕ್ ಟಿಪ್ಪುನಗರ, ಉಮರ್ ಸಾಲೆತ್ತೂರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಿಯಾಝ್ TMR ಧನ್ಯವಾದಗೈದರು.

error: Content is protected !! Not allowed copy content from janadhvani.com