ಮಕ್ಕಾ: ಪವಿತ್ರ ಉಮ್ರಾ ಕರ್ಮ ನಿರ್ವಹಿಸಲು ಉಪ್ಪಳ ಸಿ.ಯಂ ಟ್ರಾವೆಲ್ಸ್ ಮೂಲಕ ಆಗಮಿಸಿದ ಮಂಗಳೂರು ಅಡ್ಯಾರ್ ಕಣ್ಣೂರು ಸಮೀಪದ ಮನಾಲ ನಿವಾಸಿ ಹುಸೈನ್ ರವರು ದಿನಾಂಕ 19/08/2023 ರಂದು ಮಕ್ಕಾದಲ್ಲಿ ನಿಧನ ಹೊಂದಿದ್ದರು.
ವಿಷಯ ತಿಳಿದು ಕಾರ್ಯಪ್ರವೃತರಾದ ಕೆಸಿಎಫ್ ಜಿದ್ದಾ ಝೋನ್ ಸಾಂತ್ವನ ಇಲಾಖೆ ಅಧ್ಯಕ್ಷರು ಹಾಗೂ ಮಕ್ಕಾ ಸೆಕ್ಟರ್ ನಾಯಕರಾದ ಮೂಸಾ ಹಾಜಿ ಕಿನ್ಯ ಮತ್ತು ಕೆಸಿಎಫ್ ಮದೀನತುಲ್ ಮುನವ್ವರ ಝೋನ್ ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಝ್ಝಾಖ್ ಉಳ್ಳಾಲರವರು ಮೃತರ ಅಂತ್ಯಕ್ರಿಯೆಗೆ ಬೇಕಾದ ದಾಖಲೆ ಪತ್ರಗಳು, ಭಾರತೀಯ ರಾಯಭಾರಿ ಕಚೇರಿಗೆ ಕಡತಗಳು ಹಾಗೂ ಇನ್ನಿತರ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಸಿದ್ಧಪಡಿಸಲು ಪ್ರಮುಖ ಪಾತ್ರ ವಹಿಸಿದ್ದರು.
ದಫನ ವಿಧಿ ವಿಧಾನಗಳಿಗೆ CM ಟ್ರಾವೆಲ್ಸ್ ಅಮೀರ್ ಜಬ್ಬಾರ್ ಸಖಾಫಿ ಪಾತೂರು ಉಸ್ತಾದರು ನೇತೃತ್ವ ನೀಡಿದರು. ಮಯ್ಯಿತ್ ದಫನ ಕಾರ್ಯದಲ್ಲಿ ಮೃತರ ಇಬ್ಬರು ಮಕ್ಕಳು ಹಾಗೂ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಕೋಳ್ಯೂರು, ಇಹ್ಸಾನ್ ಇಲಾಖೆ ಅಧ್ಯಕ್ಷರು ಅಬ್ದುಲ್ ಲತೀಫ್ ನೆಲ್ಯಾಡಿ ಮೊದಲಾದವರು ಪಾಲ್ಗೊಂಡಿದ್ದರು.