janadhvani

Kannada Online News Paper

ಸರ್ಕಾರವು ಮದರಸ ಅಧ್ಯಾಪಕರಿಗಾಗಿ ವಿಶೇಷ ಪ್ಯಾಕೇಜ್ ಒದಗಿಸಲು ಎಸ್ ಎಂ ಎ ಆಗ್ರಹ

ವಿಟ್ಲ:ಸರಕಾರವು ಮದರಸ ಅಧ್ಯಾಪಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯ ಎಸ್ ಎಂ ಎ ಕೋಶಾಧಿಕಾರಿ ಹಾಜಿ ಹಮೀದ್ ಕೊಡಂಗಾಯಿ ಆಗ್ರಹಿಸಿದರು.

ಅವರು, ದಾರುನಜಾತ್ ಎಜುಕೇಶನಲ್ ಸೆಂಟರ್ ರ್ಟಿಪ್ಪುನಗರ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿಟ್ಲ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಇದರ ವಾರ್ಷಿಕ ಕೌನ್ಸಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಎಸ್ ಎಂ ಎ ಹಲವು ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮದರಸ ಇಲ್ಲದ ಕಡೆಗಳಲ್ಲಿ ಮದರಸ ನಿರ್ಮಿಸಲು ಮುಂದಾಗಿದ್ದು ಇದರಲ್ಲಿ ಎರಡು ಮದರಸ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದರು.

ಮೊಹಲ್ಲಾ ಪ್ರತಿನಿಧಿಗಳು ಎಸ್ ಎಂ ಎ ಸಂಘಟನೆಯನ್ನು ಮೊಹಲ್ಲಾಗಳಲ್ಲಿ ಶಕ್ತಗೊಳಿಸಿ, ಪ್ರವಾದಿ (ಸ ಅ ) ತೋರಿಸಿಕೊಟ್ಟ ಆದರ್ಶವನ್ನು ಮೈಗೂಡಿಸಿಕೊಂಡು ಸಮುದಾಯದ ಏಳಿಗೆಗಾಗಿ ಮೊಹಲ್ಲಾಗಳನ್ನು ಸಬಲೀಕರಣ ಗೊಳಿಸಲು ಆಡಳಿತ ಸಮಿತಿಯು ಎಸ್ ಎಂ ಎ ಯೊಂದಿಗೆ ಕೈಜೋಡಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಂ ಎ ವಿಟ್ಲ ರೀಜನಲ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಕೀಮ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಶಮೀಮ್ ತಂಙಳ್ ಪ್ರಾರ್ಥನೆ ನಡೆಸಿದರು. ಎಸ್ ಎಂ ಎ ವಿಟ್ಲ ರೀಜನಲ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಸಖಾಫಿ ವರದಿ ಲೆಕ್ಕಪತ್ರ ಮಂಡಿಸಿದರು.

ಸಭೆಯ ವೀಕ್ಷಕರಾಗಿ ಎಸ್ ಎಂ ಎ ಝೋನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ ಭಾಗವಹಿಸಿ ವಿಷಯ ಮಂಡನೆ ನಡೆಸಿದರು. ಝೋನಲ್ ಸಂಘಟನಾ ಕಾರ್ಯದರ್ಶಿ ಹಾರಿಸ್ ಮದನಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ
ಶರೀಫ್ ಉಕ್ಕುಡ, ಹಮೀದ್ ಹಾಜಿ ಕಾಂತಡ್ಕ, ಹಾಫಿಲ್ ಶರೀಫ್ ಫಾಳಿಲಿ ಮುದರ್ರಿಸ್ ಉಕ್ಕುಡ, ಎಸ್ ಜೆ ಎಂ ವಿಟ್ಲ ರೇಂಜ್ ಅಧ್ಯಕ್ಷರಾದ ಶರೀಫ್ ಮದನಿ, ಡಾ ಹಸೈನಾರ್, ರಫೀಕ್ ಅಹ್ಸನಿ ಒಕ್ಕೆತ್ತೂರು, ಮಜೀದ್ ಮದನಿ ಹಾಗೂ ಸುಮಾರು 18 ಮೊಹಲ್ಲಾಗಳ ಪ್ರತಿನಿಧಿಗಳು ಭಾಗವಹಿಸಿದ್ದು ಕೊನೆಯಲ್ಲಿ ಶೈಖುನಾ ವಾಲೇಮುಂಡೋ ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ರಝಾಕ್ ಸಅದಿ ವಂದಿಸಿದರು.

error: Content is protected !! Not allowed copy content from janadhvani.com