ಕುವೈಟ್ :ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಫರ್ವಾನಿಯ ಕೆಸಿಎಫ್ ಕಚೇರಿ ಯಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರ ನೇತ್ರತ್ವದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಸಭೆಯಲ್ಲಿ ಇಂಟರ್ ನ್ಯಾಷನಲ್ ಕೌನ್ಸಿಲ್ ಸದಸ್ಯರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಸ್ವಾಗತಿಸಿದರು.
ರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷ ಬಹುಮಾನ್ಯ ಉಮರ್ ಝುಹುರಿ, ಸಾಂತ್ವನ ಅಧ್ಯಕ್ಷ ಇಕ್ಬಾಲ್ ಕಂದಾವರ ಪಬ್ಲಿಕೇಷನ್ ಪ್ರಚಾರ ವಿಭಾಗ ಕಾರ್ಯದರ್ಶಿ ಇಬ್ರಾಹಿಂ ವೇಣೂರು ನೋರ್ತ್ ಝೋನ್ ಇಹ್ಸಾನ್ ಅಧ್ಯಕ್ಷ ಹೈದರ್ ಹಾಜಿ ಪಟ್ಟೋರಿ ಇಲ್ಯಾಸ್ ಮೊಂಟು ಗೋಳಿ ಅಶಂಸ ಭಾಷಣ ಗೈದರು.
ಸಭೆಯಲ್ಲಿ ಯಲ್ಲಿ ಸೌತ್ ಝೋನ್ ನಾಯಕರು ನೋರ್ತ್ ಝೋನ್ ನಾಯಕರು ಹಾಗೂ ಸೆಕ್ಟರ್ ಭಾಗವಹಿಸಿದರು. ಕೊನೆಯಲ್ಲಿ ರಾಷ್ಟ್ರೀಯ ಸಮಿತಿ ಪಬ್ಲಿಕೇಷನ್ ಪ್ರಚಾರ ವಿಭಾಗದ ಅಧ್ಯಕ್ಷ ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದರ ದುವಾ ದೊಂದಿಗೆ ಕಾರ್ಯಕ್ರಮ ಕೊನೆಗೊಂಡಿದ್ದು ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷ ಇಕ್ಬಾಲ್ ಕಂದಾವರ ಧನ್ಯವಾದ ಸಲ್ಲಿಸಿದರು.
ವರದಿ ಇಬ್ರಾಹಿಂ ವೇಣೂರು ಕುವೈಟ್