ಸುನ್ನೀ ಸೆಂಟರ್ ಅಳೇಕಲ (KMJ, SYS, SSF, SVS, Rainbow) ಇದರ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಅಳೇಕಲದ ಸುನ್ನೀ ಸೆಂಟರ್ ಬಳಿ ನಡೆಯಿತು.
KMJ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ ಉಸ್ತಾದರು ದುವಾ ಮೂಲಕ ಚಾಲನೆ ನೀಡಿದರು. ಅಳೇಕಲ ಜುಮಾ ಮಸೀದಿ ಹಾಗೂ KMJ ಅಳೇಕಲ ಶಾಖೆಯ ಅಧ್ಯಕ್ಷರಾದ ಜನಾಬ್ ಹಂಝ ಹಾಜಿಯವರು ಧ್ವಜಾರೋಹಣ ನೆರವೇರಿಸಿದರು. ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದ ಸದರ್ ಮುಅಲ್ಲಿಂ ಸೆರ್ಕಳ ಸಖಾಫಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಳೇಕಲ ಮದ್ರಸದ ಉಸ್ತುವಾರಿಯಾದ ಅಶ್ರಫ್ ಸುಳ್ಯ ಮತ್ತು ಸೆಯ್ಯಿದ್ ಜಲಾಲ್ ತಂಙಳ್ ಶುಭ ಹಾರೈಸಿದರು. SSF ಕಾರ್ಯಕರ್ತ ಸೈಫಾನ್ ಅವರು ದೇಶಭಕ್ತಿ ಗೀತೆಯನ್ನು ಹಾಡಿದರು. ಫಾಝಿಲ್ ಅಳೇಕಲ ಸ್ವಾಗತಿಸಿ, ಸುನ್ನೀ ಸೆಂಟರ್ ಕನ್ವೀನರ್ ರಿಯಾಝ್ ಅಳೇಕಲ ಕಾರ್ಯಕ್ರಮ ನಿರೂಪಿಸಿದರು. ಶಫೀಖ್ ಇಂಜಿನಿಯರ್ ದನ್ಯವಾದಗೈದರು.