ವೈವಿದ್ಯತೆ ಭಾರತದ ವೈಶಿಷ್ಟತೆ ಎಂಬ ದ್ಯೇಯ ವಾಕ್ಯದಲ್ಲಿ ಕರ್ನಾಟಕ ಕಲ್ಚರಲ್ ಫಂಡೇಶನ್ (ಕೆ.ಸಿ.ಎಫ್) ನಡೆಸುತ್ತಿರುವ ಸ್ವಾತಂತ್ರ್ಯ ದಿನಾಚರಣೆಯು ವಿಜ್ರಂಭಣೆಯಿಂದ ನಡೆಸಲಾಯಿತು
ರಾಷ್ಟ್ರ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಸದಸ್ಯರು ರಾಷ್ಟ್ರ ಗೀತೆ ಹಾಡಿ ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಿದರು.
ಸ್ವಾತಂತ್ರ್ಯ ಸಂಗ್ರಾಮ ಹಾಗೂ ಭವ್ಯ ಭಾರತದ ಇತಿಹಾಸ ಎಂಬ ವಿಷಯದ ಬಗ್ಗೆ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸವಿವರವಾಗಿ ವಿವರಿಸಿದರು
ಬುರೈದ ಸೆಕ್ಟರ್ ಅಧ್ಯಕ್ಷರಾದ ಮುಸ್ತಫಾ ಲತೀಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಬ್ದುಲ್ ಕಾದರ್ ಕಣ್ಣಂಗಾರ್ ಉದ್ಘಾಟಿಸಿ ಯಾಕೂಬ್ ಸಖಾಫಿ ದುವಾ ನೇರವೇರಿಸಿದರು.
ಮುಸ್ತಫಾ ಹಾಸನ, ಬಶೀರ್ ಕನ್ಯಾನ ಆಶಂಸಾ ಮಾತುಗಳನ್ನಾಡಿದರು
ಇರ್ಷಾದ್ ಸಚ್ಚೇರಿಪೇಟೆ ಸ್ವಾಗತಿಸಿ ಬಶೀರ್ ಬನ್ನೂರು ವಂದಿಸಿದರು