janadhvani

Kannada Online News Paper

ಕರ್ನಾಟಕ ಮುಹ್ಯಿಸ್ಸುನ್ನ; ನೂತನ ಸಮಿತಿ ಅಸ್ತಿತ್ವಕ್ಕೆ

ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದರ ಕನ್ನಡಿಗ ಶಿಷ್ಯಂದಿರ ಸಂಘಟನೆ ಮುಹ್ಯಿಸ್ಸುನ್ನ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ಮಹಾಸಭೆಯು ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿ ಜಾಮಿಅ ಹಿಕಮಿಯ್ಯ ಸಂಸ್ಥೆಯ ಕಾನ್ಫರೆನ್ಸ್ ಹಾಲ್ ನಲ್ಲಿ ಮುಹ್ಯಿಸ್ಸುನ್ನ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪಲ್ಲಾರ್ ಹಸನ್ ಬಾಖವಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದ್ ರವರು ಉದ್ಘಾಟಿಸಿ ಹಿತೋಪದೇಶಗಳನ್ನು ನೀಡಿದರು.

ಸಮಸ್ತ ಮುಶಾವರ ಸದಸ್ಯರಾದ ಕೊಳತ್ತೂರು ಅಲವಿ ಸಖಾಫಿ ಉಸ್ತಾದ್, ಸಂಸ್ಥೆಯ ಹಿರಿಯ ಮುದರ್ರಿಸರಾದ ಮುಹಮ್ಮದ್ ಸಖಾಫಿ ಇಲ್ಲಿಪ್ಪುಲಾಕಲ್, ಸೂಫಿ ಉಸ್ತಾದ್, ಜನರಲ್ ಮ್ಯಾನೇಜರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್, ರಹೀಂ ಸಖಾಫಿ ನಡುವಟ್ಟಮ್, ರಹೀಂ ಸಖಾಫಿ ಮನ್ನಾರ್ಕಾಡ್, ಖಲಂದರ್ ಸಿಹಾನ್ ಸಖಾಫಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಸಂಘಟನೆಯ ನಿಕಟ ಪೂರ್ವ ಪ್ರ. ಕಾರ್ಯದರ್ಶಿ ಉಸ್ಮಾನ್ ಸಖಾಫಿ ಪಾತೂರು ವರದಿ ವಾಚಿಸಿ ಲೆಕ್ಕ ಮಂಡಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಉಸ್ತಾದ್ ಹಸನ್ ಬಾಖವಿ ಪಲ್ಲಾರ್ ರವರು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿ ಕೊಟ್ಟರು. ಅಡ್ವೈಸರ್ ಗಳಾಗಿ ಅಶ್ರಫ್ ಸಖಾಫಿ ಕಿನ್ಯ, ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗೂ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅಧ್ಯಕ್ಷರಾಗಿ ಹಾಫಿಲ್ ಅಹ್ಮದ್ ಶರೀಫ್ ಸಖಾಫಿ ಅಲ್ ಕಾಮಿಲ್ ಉಕ್ಕುಡ, ಪ್ರಧಾನ ಕಾರ್ಯದರ್ಶಿಯಾಗಿ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಹಿಕಮಿ, ಕೋಶಾಧಿಕಾರಿಯಾಗಿ ನೌಫಲ್ ಸಖಾಫಿ ಅಲ್ ಹಿಕಮಿ ಕಳಸ ಹಾಗೂ 19 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com