janadhvani

Kannada Online News Paper

ಕೆಸಿಎಫ್ ದುಬೈ ಸೌತ್ ಝೋನ್ ಬೃಹತ್‌ ಮೀಲಾದ್ ಕಾನ್ಸರೆನ್ಸ್- ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ಸೌತ್ ಝೋನ್ ವತಿಯಿಂದ ಅಕ್ಟೋಬರ್ 8 ರಂದು ನಡೆಯುವ ಬೃಹತ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು, ಕೆಸಿಎಫ್‌ ಯುಎಇ ನಾಲೆಡ್ಜ್‌ ವಿಭಾಗದ ಕಾರ್ಯದರ್ಶಿ ಶಾಹುಲ್‌ ಹಮೀದ್‌ ಸಖಾಫಿಯವರ ಅಧ್ಯಕ್ಷತೆಯಲ್ಲಿ ಬೇ ಬೈಟ್ಸ್ ಹೋಟೆಲಿನಲ್ಲಿ ನಡೆಯಿತು. ಅಝೀಝ್ ಕೆದಿಲರ ಸ್ವಾಗತದೊಂದಿಗೆ ಪಾರಂಭವಾದ ಕಾರ್ಯಕ್ರಮವನ್ನು ರಶೀದ್‌ ಹನೀಫಿ ಉದ್ಘಾಟಿಸಿದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿಯವರ ಮುಖ್ಯ ಭಾಷಣದ ನಂತರ ನೂತನ ಸ್ವಾಗತ ಸಮಿತಿಯ ಚೇರ್ ಮ್ಯಾನ್ ಆಗಿ ಇಕ್ಬಾಲ್ ಸಿದ್ದಕಟ್ಟೆ, ವರ್ಕಿಂಗ್ ಚೇರ್ ಮ್ಯಾನ್ ನಝೀರ್ ಹಾಜಿ ಕೆಮ್ಮಾರ, ಕನ್ವೀನರ್ ಅಶ್ಫಾಕ್ ಕೊಡಗು, ವರ್ಕಿಂಗ್ ಕನ್ವೀನರ್ ಆಸಿಫ್ ಇಂದ್ರಾಣಿ, ಕೋಶಾಧಿಕಾರಿ ಅಬ್ದುಲ್ ಜಲೀಲ್ ಕಾಸರಗೋಡು, ಫಿನಾನ್ಶಿಯಲ್ ಚೇರ್ ಮ್ಯಾನ್‌ ಇಬ್ರಾಹಿಂ ಹೆಜಮಾಡಿ, ಮೀಡಿಯಾ ಚೇರ್ ಮ್ಯಾನ್ ಮುಸ್ತಫಾ ಸಖಾಫಿ, ಪಬ್ಲಿಕೇಶನ್ ಚೇರ್ ಮ್ಯಾನ್‌ ರಶೀದ್ ಹನೀಫಿ ಸೇರಿದಂತೆ ವಿವಿಧ ವಿಭಾಗಗಳಿಗೆ ಕಾರ್ಯಕರ್ತರನ್ನು ಆರಿಸಲಾಯಿತು.

ಕೆಸಿಎಫ್ ಅಂತರ್ರಾಷ್ಟ್ರೀಯ ಪ್ರತಿಭೋತ್ಸವದಲ್ಲಿ ಖಿರಾಅತ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದ ಆಶಿಕ್ ರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದುಬೈ ಸೌತ್ ರೋನ್‌ ಕಾರ್ಯದರ್ಶಿ ಮನ್ಸೂರ್ ಹರೇಕಳ ಕಾರ್ಯಕ್ರಮವನ್ನು ನಿರೂಪಿಸಿ, ಆಸಿಫ್ ಇಂದ್ರಾಜೆ ವಂದಿಸಿದರು.

error: Content is protected !! Not allowed copy content from janadhvani.com