janadhvani

Kannada Online News Paper

ಖತಾರ್ ರಿಯಾಲ್ ಗೆ 18.51 ರೂಪಾಯಿ- ಹಣ ಕಳುಹಿಸಲು ಸುವರ್ಣಾವಕಾಶ

ದೋಹಾ: ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮತ್ತೆ  ಕುಸಿತ ಕಂಡಿದೆ ಇದರೊಂದಿಗೆ, ಇತ್ತೀಚಿನ ದಿನಗಳಲ್ಲಿ ಕತಾರ್‌ನ ಮೌಲ್ಯವು ಉನ್ನತ ಮಟ್ಟಕ್ಕೆ ಏರಿದೆ.
ಪ್ರಸ್ತುತ, ಕತರ್ ರಿಯಾಲ್ ಬೆಲೆಯು 18.51 ರೂಪಾಯಿ ನಿನ್ನೆಯ ಧಾರಣೆಯಾಗಿತ್ತು.

ಮೇ ಮೊದಲ ವಾರದಲ್ಲಿ, ಊರಿಗೆ ಹಣ ಕಳಿಸುವುದರಲ್ಲಿ ಹೆಚ್ಚಳ ಕಂಡುಬಂದಿದೆ.ಮಾರುಕಟ್ಟೆಯಲ್ಲಿ ಉತ್ತಮ ವಿನಿಮಯ ದರ ಲಭ್ಯವಾದ ಕಾರಣ ಅನೇಕ ಜನರು ಈಗಾಗಲೇ ಮನೆಗೆ ಹಣ ಕಳುಹಿಸಿದ್ದಾರೆರೂಪಾಯಿ 15 ತಿಂಗಳಲ್ಲಿ ಅತ್ಯಂತ ಕೆಲ ಮಟ್ಟವನ್ನು ತಲುಪಿದೆ. ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 67.27 ಕ್ಕೆ ಕುಸಿದಿದೆ.

ಇರಾನ್‌ನ ಅಣ್ವಸ್ತ್ರ ಒಪ್ಪಂದದಿಂದ ಅಮೆರಿಕ ಹಿಂತೆಗೆದುಕೊಂಡಿರುವ ಕಾರಣ ರೂಪಾಯಿ ಮೌಲ್ಯ ಕಳೆದುಕೊಂಡಿತು ಮತ್ತು ಇದು ಜಾಗತಿಕ ತೈಲ ಬೆಲೆಗಳ ಹೆಚ್ಚಳಕ್ಕೆ ಕಾರಣವಾಯಿತು. ಕಳೆದ ಮೂರು ವಾರಗಳಲ್ಲಿ ರೂಪಾಯಿ ಕುಸಿದಿದೆ.

ಡಾಲರ್ ವಿರುದ್ಧ ರೂಪಾಯಿಗೆ 67.3815 ರ ದರವನ್ನು ಆರ್ಬಿಐ ನಿಗದಿಪಡಿಸಿದೆ.ಜಾಗತೀಕ ಮಟ್ಟದಲ್ಲಿ ಡಾಲರ್ ದರ ಶಕ್ತವಾಗಿದ್ದು, ತೈಲ ಬೆಲೆ ಹೆಚ್ಚಳದಂತಹ ಅಂಶಗಳು ರೂಪಾಯಿಗೆ ಪ್ರತಿಕೂಲ ಅಂಶಗಳಾಗಿ ಅದರ ಮೌಲ್ಯವು ಕಡಿಮೆ ಮಟ್ಟಕ್ಕೆ ತಲುಪುವಂತಾಗಿದೆ.

ರೂಪಾಯಿ ಮೌಲ್ಯ ಮತ್ತಷ್ಟು ಇಳಿಯುವುದು ಸಾಧ್ಯವಿಲ್ಲ. ಆದ್ದರಿಂದ ಹಣವನ್ನು ಊರಿಗೆ ಕಳುಹಿಸಲು ಇದು ಒಂದು ಉತ್ತಮ ಅವಕಾಶವಾಗಿದೆ ಎಂದು ದೋಹಾ ಬ್ಯಾಂಕ್ ಖಜಾನೆ ಹೂಡಿಕೆ ಇಲಾಖೆಯ ಮಾಜಿ ಕಾರ್ಯನಿರ್ವಾಹಕ ವ್ಯವಸ್ಥಾಪಕ ಕೆ.ವಿ. ಸಾಮ್ಯುವೆಲ್ ಹೇಳಿದರು.

error: Content is protected !! Not allowed copy content from janadhvani.com