janadhvani

Kannada Online News Paper

ಬೆಳ್ತಂಗಡಿ ತಾಲೂಕಿನಲ್ಲಿ ನೈತಿಕ ಪೊಲೀಸ್ ಗಿರಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ SჄS ಬೆಳ್ತಂಗಡಿ ಝೋನ್ ನಿಂದ ಮುಖ್ಯಮಂತ್ರಿಗೆ ಮನವಿ

ಬೆಳ್ತಂಗಡಿ : ತಾಲೂಕಿನ ಎಲ್ಲಾ ಜಾತಿ ಧರ್ಮಗಳ ಜನರು ಪರಸ್ಪರ ಸ್ನೇಹ ಸೌಹಾರ್ದತೆ ಸಾಮರಸ್ಯ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲವೊಂದು ಕಿಡಿಗೇಡಿಗಳು ಕ್ಷುಲ್ಲಕ ಕಾರಣ ನೀಡಿ ಶಾಂತಿ ಸೌಹಾರ್ದತೆ ಕೆಡಿಸುವ ಪ್ರಯತ್ನ, ನೈತಿಕ ಪೋಲೀಸ್‌ಗಿರಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರ ಮೇಲೆ ದೌರ್ಜನ್ಯ ಮೊದಲಾದ ಕೃತ್ಯಗಳು ತಾಲೂಕಿನ ವಿವಿಧೆಡೆ ನಡೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ.

ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರುಗಳಿಗೆ ಬೆಳ್ತಂಗಡಿ ತಾಲೂಕು ತಹಸೀಲ್ಧಾರರ ಮುಖಾಂತರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ SჄS ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಬಿ ಮುಹಮ್ಮದ್ ಸಾಧಿಕ್ ಮಾಸ್ಟರ್ ಮಲೆಬೆಟ್ಟು, SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಕಾಸಿಂ ಮುಸ್ಲಿಯಾರ್ ಮಾಚಾರು, ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ನಝೀರ್ ಪೆರ್ದಾಡಿ, ಸಾಂತ್ವನ ಕಾರ್ಯದರ್ಶಿ ಸಲೀಂ ಕನ್ಯಾಡಿ, ಸದಸ್ಯರಾದ ಸಿದ್ದೀಖ್ ಪರಪ್ಪು, ಅಯ್ಯೂಬ್ ಮಹ್ಲರಿ ಕಾವಳಕಟ್ಟೆ, SSF ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ಶಾಫಿ ಮದನಿ ಪಾಂಡವರಕಲ್ಲು, ಪ್ರಧಾನ ಕಾರ್ಯದರ್ಶಿ ನವಾಝ್ ಜಾರಿಗೆಬೈಲು, ಸದಸ್ಯರಾದ ಅಬ್ದುಲ್ಲತೀಫ್ ಅಹ್ಸನಿ ಮಲೆಬೆಟ್ಟು ಮತ್ತಿತರರು ಹಾಜರಿದ್ದರು.

error: Content is protected !! Not allowed copy content from janadhvani.com