ಮಂಗಳೂರು: ಮತೀಯ ವಿದ್ವೇಷವನ್ನೆ ಉಸಿರಾಗಿಸಿಕೊಂಡ ಸಂಘ ಪರಿವಾರಕ್ಕೆ ಮುಸ್ಲಿಮ್ ಹೊರತಾದ ಸಮಸ್ಯೆಗಳು ಪತ್ಯವಲ್ಲ.
ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣದ ವಾಸ್ತವ ಸತ್ಯವನ್ನು ಮೀರಿ ಸಂಘ ಪರಿವಾರ ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣರ ಮೂಲಕ ವಿಷಯವನ್ನು ರಾಷ್ಟ್ರ ಮಟ್ಟಕ್ಕೆ ವೈಭವೀಕರಿಸಲು ಪ್ರಯತ್ನಿಸುತ್ತಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆಯ ವ್ಯಾಪ್ತಿಯಲ್ಲಿಯೇ ಬಗೆಹರಿಯುವ ಸಮಸ್ಯೆಯನ್ನು ಬಲವಂತವಾಗಿ ಹೊರ ತಂದಂತಿದೆ ಮತ್ತು ಆ ಮೂಲಕ ಉಡುಪಿಯಿಂದಲೆ ಮತೀಯ ವಿದ್ವೇಶಿತ ಧೃವೀಕರಣಕ್ಕಾಗಿ ಸಜ್ಜು ಗೊಂಡಂತಿದೆ. ಯಷ್ಪಾಲ್ ಸುವರ್ಣರಂತಹ ವಿದ್ವಂಸಕಾರಿ ಹಿನ್ನೆಲೆಯುಳ್ಳ ವ್ಯಕ್ತಿಯ ಮೂಲಕ ಮತೀಯ ಪ್ರಚೋದಿತ ಹೇಳಿಕೆಗಳನ್ನು ನೀಡಲಾಗುತ್ತಿದೆ.
ಇಂದು ಮತೀಯ ವಿದ್ವೇಷ ಕಾರುವವರು ನಾಳೆ ಉಡುಪಿಯನ್ನು ಇನ್ನೊಂದು ಮಣಿಪುರ ಮಾಡಲು ಹಿಂಜರಿಯಲಾರರು. ಮಣಿಪುರದಲ್ಲಿ ರಾಜ್ಯ ಪ್ರೇರಿತ ಜನಾಂಗೀಯ ಹತ್ಯೆಯನ್ನು ತುಟಿ ಪಿಟಿಕ್ ಎನ್ನದೆ ನಿಶ್ಯಬ್ದ ಪಾಲಿಸಿದ ಮತ್ತು ಮಣಿಪುರದ ಆದಿವಾಸಿ ಬಡ ಅಮಾಯಕ ಮಹಿಳೆಯರ ಬೆತ್ತಲೆ ಘಟನೆಗೆ ಕಿಂಚಿತ್ತೂ ಪ್ರತಿಭಟಿಸದ ಈ ಕೇಶವ ಕೃಪಾ ಅನುಯಾಯಿಗಳಿಗೆ ವಾಸ್ತವ ರಹಿತ ವಿಧ್ಯಾರ್ಥಿಗಳ ವೀಡಿಯೊ ಮಹಾ ಅಪರಾಧವಾಗಿ ಕಂಡದ್ದು ವಿಪರ್ಯಾಸ,ಇಂತಹ ಪ್ರಭೇದ ಶಕ್ತಿಗಳ ಸಾಂದರ್ಭಿಕ ಲಾಭದಾರಿಕೆಯನ್ನು ಜನರು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಅಶ್ರಫ್.ಕೆ( ಮಾಜಿ ಮೇಯರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.