ಕೋಲಾರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ಸಮಿತಿ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಪ್ರಯುಕ್ತ ಹಮ್ಮಿಕೊಂಡಿರುವ ಗೋಲ್ಡನ್ ಸಫಾರಿ ಯಾತ್ರೆ ಇಂದು ಕೋಲಾರ ಖುತುಬೇ ಶಹಂಶಾಹ್ ನಗರದ ಖಾನ್‌ಖಾ ಏ ಜುನೈದಿಯಾ ಸಭಾಂಗಣದಲ್ಲಿ ಸಮಾರೋಪಗೊಂಡಿತು.
ಜೂನ್ 05 ರಂದು ಬೆಂಗಳೂರಿನ ತವಕ್ಕಲ್ ಮಸ್ತಾನ್ ದರ್ಬಾರಿನಲ್ಲಿ ಝಿಯಾರತ್ ನೊಂದಿಗೆ ಆರಂಭಗೊಂಡ ರಾಜ್ಯ ನಾಯಕರ ಗೋಲ್ಡನ್ ಸಫಾರಿ ಯಾತ್ರೆ 31 ಜಿಲ್ಲೆಗಳ ಮೂಲಕ ಹಾದು ಹೋಗಿ ಸುಮಾರು ಏಳು ಸಾವಿರ ಕಿಲೋಮೀಟರ್ ಸಂಚರಿಸಿ ಇಂದು ಕೋಲಾರ ಖುತುಬೇ ಶಹಂಶಾಹ್ ನಗರದಲ್ಲಿ ಸಮಾಪ್ತಿ ಗೊಂಡಿತು.ರಾಜ್ಯದ ಅರವತ್ತು ಕೇಂದ್ರಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ಜಿಲ್ಲಾ ಡಿವಿಷನ್ ಸೆಕ್ಟರ್ ಹಾಗೂ ಯುನಿಟ್ ನಾಯಕರ ಜೊತೆ ಚರ್ಚೆಗಳು ನಡೆದವು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ಕೋಶಾಧಿಕಾರಿ ಕೆಎಂ ಮುಸ್ತಫಾ ನಈಮಿ ಹಾವೇರಿ, ಮುಜೀಬ್ ಕೊಂಡಂಗೇರಿ, ಉಬೈದುಲ್ಲಾ ಕುತ್ತಾರ್, ಜುನೈದ್ ಸಖಾಫಿ ಚಿತ್ರದುರ್ಗ, ಅಶ್ರಫ್ ಸಖಾಫಿ ಹರಿಹರ, ಅನ್ವರ್ ಅಸ್‌ಅದಿ, ಹಾಗೂ ಇನ್ನಿತರ ಎಸ್ಸೆಸ್ಸೆಫ್ ರಾಜ್ಯ ನಾಯಕರು ಹಾಜರಿದ್ದರು.