ರಿಯಾದ್: ಹಜ್ ವಿಧಿವಿಧಾನಗಳನ್ನು ಮುಗಿಸಿದ ಯಾತ್ರಾರ್ಥಿಗಳು ಮಕ್ಕಾದಿಂದ ಮದೀನಾ ತಲುಪಿದ್ದಾರೆ. ಶುಕ್ರವಾರ ರಾತ್ರಿ ಯಾತ್ರಿಕರು ಮಕ್ಕಾದಿಂದ ಮದೀನಾಕ್ಕೆ ತೆರಳಲು ಆರಂಭಿಸಿದ್ದಾರೆ. ಅಲ್ ಹರಮೈನ್ ರೈಲಿನಲ್ಲಿ ಮತ್ತು ರಸ್ತೆ ಮಾರ್ಗವಾಗಿದೆ ಪ್ರಯಾಣ. ಮುಂದಿನ ದಿನಗಳಲ್ಲಿ ಹೆಚ್ಚಿನ ಯಾತ್ರಿಕರು ಮದೀನಾಕ್ಕೆ ತಲುಪಲಿದ್ದಾರೆ.
ಹಜ್ ಯಾತ್ರೆಗೂ ಮುನ್ನ ಮದೀನಾಕ್ಕೆ ಭೇಟಿ ನೀಡದ ಭಾರತೀಯರು ಸೇರಿದಂತೆ ಯಾತ್ರಾರ್ಥಿಗಳ ಮದೀನಾ ಸಂದರ್ಶನ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ. ‘ಖಾದಿಮುಲ್ ಹರಮೈನ್’ ಹಜ್ ಕಾರ್ಯಕ್ರಮದಡಿ ಆಗಮಿಸಿದ ಮೊದಲ ಬ್ಯಾಚ್ ಕೂಡ ಮದೀನಾ ತಲುಪಿತು. ಈ ಯೋಜನೆಯಡಿ 92 ದೇಶಗಳ 4,951 ಯಾತ್ರಿಕರು ಈ ಬಾರಿ ಹಜ್‌ಗೆ ತಲುಪಿದ್ದಾರೆ.
ಇದರಲ್ಲಿ ಪ್ಯಾಲೇಸ್ಟಿನಿಯನ್ ಹುತಾತ್ಮರ ಮತ್ತು ಗಾಯಗೊಂಡವರ ಕುಟುಂಬಗಳಿಂದ 1,000 ಮತ್ತು ಯೆಮೆನ್ ಯುದ್ಧದಲ್ಲಿ ಹುತಾತ್ಮರ ಮತ್ತು ಗಾಯಗೊಂಡ ಕುಟುಂಬಗಳಿಂದ 1,000 ಮಂದಿ ಸೇರಿದ್ದಾರೆ.
ಹಜ್ಜ್ ಬಳಿಕ ಮದೀನಾಕ್ಕೆ ಆಗಮಿಸುವ ಯಾತ್ರಾರ್ಥಿಗಳನ್ನು ಬರಮಾಡಿಕೊಳ್ಳಲು ಮಸ್ಜಿದುನ್ನಬವಿ ಕಾರ್ಯಾಲಯ ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ರಸ್ತೆ ಸುರಕ್ಷತಾ ವಿಭಾಗವು ಮಕ್ಕಾದಿಂದ ಮದೀನಾವರೆಗಿನ ರಸ್ತೆಗಳಲ್ಲಿ ಹೆಚ್ಚಿನ ತಂಡಗಳನ್ನು ನಿಯೋಜಿಸಿದ್ದು, ಭೂಮಾರ್ಗದ ಮೂಲಕ ಯಾತ್ರಾರ್ಥಿಗಳ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಹಜ್ ಬಸ್ ಮಾರ್ಗಸೂಚಿ ಇಲಾಖೆಯು ಬಸ್ ಸ್ವಾಗತ ಕೇಂದ್ರಗಳಲ್ಲೂ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.