janadhvani

Kannada Online News Paper

ಸಾಮಾಜಿಕ ಮೌಲ್ಯಗಳಿಗೆ ಬೆಲೆ ನೀಡದ ಸ್ವೀಡನ್ ಸರ್ಕಾರದ ನಿರ್ಧಾರ ತೀವ್ರ ಖಂಡನೀಯ- ಯುಎಇ

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಂತಹ ಹೇಯ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳಬಾರದು.

ಅಬುಧಾಬಿ: ಸ್ವೀಡನ್ ನಲ್ಲಿ ಖುರ್‌ಆನ್ ಸುಟ್ಟ ಘಟನೆಗೆ ಸಂಬಂಧಿಸಿದಂತೆ ಯುಎಇ ರಾಯಭಾರಿಯನ್ನು ಕರೆಸಿ ತನ್ನ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ವೀಡಿಷ್ ರಾಯಭಾರಿಯನ್ನು ಕರೆಸಿ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು.

ಇಂತಹ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ಅವಕಾಶ ನೀಡಿರುವ ಸ್ವೀಡನ್ ಸರ್ಕಾರದ ನಿರ್ಧಾರವನ್ನು ಯುಎಇ ಖಂಡಿಸಿದೆ. ಸಾಮಾಜಿಕ ಮೌಲ್ಯಗಳಿಗೆ ಬೆಲೆ ನೀಡದೆ, ಅಂತಾರಾಷ್ಟ್ರೀಯ ಬದ್ಧತೆಗಳಿಂದ ಸ್ವೀಡನ್ ಹಿಂದೆ ಸರಿಯುತ್ತಿದೆ ಎಂದು ಯುಎಇ ಆರೋಪಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಂತಹ ಹೇಯ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳಬಾರದು. ದ್ವೇಷ ಪ್ರಚಾರ ಮತ್ತು ವರ್ಣಭೇದ ನೀತಿಯನ್ನು ಪ್ರಬಲವಾಗಿದೆ ವಿರೋಧಿಸುವಂತೆ ಯುಎಇ ಕರೆ ನೀಡಿದೆ.

error: Content is protected !! Not allowed copy content from janadhvani.com