janadhvani

Kannada Online News Paper

ಸೌದಿ ಅರೇಬಿಯಾ: ಸಂದರ್ಶನ ವೀಸಾ ಶುಲ್ಕದಲ್ಲಿ ಭಾರೀ ಇಳಿಕೆ

ರಿಯಾದ್: ಸೌದಿ ಅರೇಬಿಯಾದ ಸಂದರ್ಶನ ವೀಸಾ ದರವನ್ನು ಭಾರೀ ಕಡಿತ ಗೊಳಿಸಲಾಗಿದೆ. 2,000 ರಿಯಾಲ್ ನಿಂದ 300 ರಿಯಾಲ್ ಗೆ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಸ್ಟಾಂಪಿಂಗ್ ಕಾನ್ಸುಲೆಟ್‌ಗೆ ಭೇಟಿ ನೀಡಿದ ಭಾರತೀಯ ಟ್ರಾವೆಲ್ ಎಜೆಂಟರು ಈ ಮಾಹಿತಿಯನ್ನು ನೀಡಿದ್ದಾರೆ.ಹೊಸ ನಿರ್ಧಾರದಿಂದಾಗಿ ವಲಸಿಗರು ನಿಟ್ಟುಸಿರು ಬಿಡುವಂತಾಗಿದೆ.

ಕ್ಯಾಬಿನೆಟ್ ನಿರ್ಧಾರದ ಪ್ರಕಾರ, 2016 ರ ವೇಳೆಗೆ 200 ರಿಯಾಲ್ ಇದ್ದ ವೀಸಾ ಶುಲ್ಕವನ್ನು 2,000 ಕ್ಕೆ ಹೆಚ್ಚಿಸಲಾಗಿತ್ತು. ಹೆಚ್ಚಳದ ನಂತರ, ಸಂದರ್ಶನ ವಿಸಾದಲ್ಲಿ ಕುಟುಂಬವನ್ನು ಕರೆತರುವವರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿತ್ತು.

300 ರಿಯಾಲ್ ಸ್ಟ್ಯಾಂಪಿಂಗ್ ಶುಲ್ಕ ಆದರೆ, ಪಾಸ್ಪೋರ್ಟ್ ಗೆ ಸ್ಟಾಂಪಿಂಗ್‌ನಲ್ಲಿ ಮಾತ್ರ 30,000ರೂ. ಲಾಭ ಉಂಟಾಗಲಿದೆ.ಹೊಸ ನಿರ್ಧಾರವು ಸೌದಿಯ ಆರ್ಥಿಕ ವಲಯಕ್ಕೆ ಹೊಸ ಹುರುಪನ್ನು ನೀಡಲಿದೆ.

ಸಾವಿರಾರು ವಿದೇಶಿ ಕುಟುಂಬಗಳಿಗೆ ವೀಸಾ ಶುಲ್ಕವನ್ನು 2000 ಕ್ಕೆ ಏರಿಸಿದ ಕಾರಣಕ್ಕಾಗಿ ಕುಟುಂಬವನ್ನು ಸೌದಿಗೆ ಕರೆತರಲು ಸಾಧ್ಯವಾಗಿರಲಿಲ್ಲ.

ಇನ್ನು ವಲಸಿಗರ ಕುಟುಂಬಗಳು ಸೌದಿ ಅರೇಬಿಯಾಕ್ಕೆ ಹರಿಯಲಿವೆ. ಇದು ಆರ್ಥಿಕತೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಉಂಟು ಮಾಡಲಿದೆ.ಅಂತಿಮ ನಿರ್ಗಮನದಲ್ಲಿ ಕುಟುಂಬಗಳು ಊರಿಗೆ ತೆರಳುವ ಕಾರಣದಿಂದಾಗಿ ಕಟ್ಟಡಗಳು ಖಾಲಿಯಾಗಿದ್ದವು,ಆದರೆ ಹೆಚ್ಚು ಜನರು ಸಂದರ್ಶನ ವಿಸಾದಲ್ಲಿ ಭೇಟಿ ನೀಡಿದಾಗ ಪರಿಸ್ಥಿತಿ ಬದಲಾಗಲಿದೆ. ಕುಟುಂಬ ವೀಸಾವನ್ನು ಮೂರು ತಿಂಗಳು ಅವಧಿಗಾಗಿ ಸ್ಟಾಂಪಿಂಗ್ ಮಾಡಲಾಗುತ್ತದೆ.

ಮೂರು ತಿಂಗಳ ಅವಧಿ ಮುಕ್ತಾಯಗೊಂಡಾಗ, ಅದನ್ನು ಮೂರು ತಿಂಗಳವರೆಗೆ ಮತ್ತೆ ನವೀಕರಿಸಬಹುದು. ಆದಾಗ್ಯೂ, ಹೊಸ ನಿರ್ಧಾರವು ಆರ್ಥಿಕ ಕ್ಷೇತ್ರದ ಉನ್ನತಿಗೆ ಕಾರಣವಾಗಬಹುದು. ಹಳೆಯ ಹುರುಪಿಗೆ ಮಾರುಕಟ್ಟೆಯು ಮರಳಲಿದೆ ಎಂದು ನಂಬಲಾಗಿದೆ.

2000 ರಯಾಲ್ ಶುಲ್ಕ ವಿಧಿಸಿದ ನಂತರ ಸಂದರ್ಶನ ವೀಸಾದಲ್ಲಿ  ಸೌದಿಗೆ ತೆರಳುವ ಸಂದರ್ಶಕರ ಸಂಖ್ಯೆ ತೀವ್ರವಾಗಿ ಕುಸಿದಿದ್ದವು.

ಇದೀಗ ದಿಢೀರನೆ ಶುಲ್ಕವನ್ನು 300 ರಿಯಾಲ್‌ಗೆ ಇಳಿಸಲಾಗಿದ್ದು, ಜನರು ಈ ಪ್ರಯೋಜನವನ್ನು ಪಡೆಯುವರು ಎಂದು ನಿರೀಕ್ಷಿಸಲಾಗಿದೆ. ಇದು ಟ್ರಾವೆಲ್ ಏಜೆಂಟರು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಸಹಾಯಕವಾಗಲಿದೆ.

error: Content is protected !! Not allowed copy content from janadhvani.com