janadhvani

Kannada Online News Paper

ಉಮ್ರಾ ಯಾತ್ರಿಕರ ಇನ್ಶೂರೆನ್ಸ್‌ ವೆಚ್ಚದಲ್ಲಿ ಶೇ.63 ಕಡಿತ- ಸೇವೆ ಹೆಚ್ಚಳ

ಜನವರಿ 10 ರಿಂದ ಜಾರಿಗೆ ಬರುವಂತೆ SR235 ($62) ನಿಂದ SR87 ಗೆ ವೆಚ್ಚವನ್ನು ಕಡಿತಗೊಳಿಸಿದೆ

ರಿಯಾದ್: ವಿದೇಶಿ ಉಮ್ರಾ ಯಾತ್ರಿಕರ ಸಮಗ್ರ ವಿಮಾ (Comprehensive Insurance) ವೆಚ್ಚದಲ್ಲಿ 63 ಪ್ರತಿಶತಕ ಕಡಿತವು ಜಾರಿಗೆ ಬಂದಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ(Saudi Ministry of Hajj and Umrah) ಪ್ರಕಟಿಸಿದೆ.

ಹಜ್ ಮತ್ತು ಉಮ್ರಾ ಸಚಿವಾಲಯವು ಜನವರಿ 10 ರಿಂದ ಜಾರಿಗೆ ಬರುವಂತೆ ಸೌದಿ ರಿಯಾಲ್ SR235 ($62) ನಿಂದ SR87 ಗೆ ವೆಚ್ಚವನ್ನು ಕಡಿತಗೊಳಿಸಿದೆ. ಉಮ್ರಾ ವೀಸಾದ ಆರಂಭಿಕ ಕಾರ್ಯವಿಧಾನಗಳಲ್ಲಿ ಇದನ್ನು ಒಳಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ವಿಮಾ ಪ್ಯಾಕೇಜ್‌ನಲ್ಲಿ ಚಿಕಿತ್ಸೆ, ಆಸ್ಪತ್ರೆ ಪ್ರವೇಶ, ಗರ್ಭಧಾರಣೆಯ ಚಿಕಿತ್ಸೆ, ತುರ್ತು ಹೆರಿಗೆ, ಅಗತ್ಯ ದಂತ ಚಿಕಿತ್ಸೆ, ವಾಹನ ಅಪಘಾತ ಸಂಬಂಧಿತ ಗಾಯಗಳು, ಡಯಾಲಿಸಿಸ್ ಮತ್ತು ವೈದ್ಯಕೀಯ ಸಾರಿಗೆಯಂತಹ(Medical Transportation) ತುರ್ತು ಪರಿಸ್ಥಿತಿಗಳನ್ನು ಒಳಗೊಂಡಿದೆ.

ಯಾತ್ರಿಕರು ಸೌದಿ ಅರೇಬಿಯಾಕ್ಕೆ ಆಗಮಿಸಿದ ನಂತರ ಅಪಘಾತ ಅಥವಾ ಇನ್ನಿತರ ಕಾರಣಗಳಿಂದ ಆಕಸ್ಮಿಕವಾಗಿ ಶಾಶ್ವತ ಅಂಗವೈಕಲ್ಯ, ನೈಸರ್ಗಿಕ ವಿಕೋಪಗಳಿಂದ ಮರಣ, ಮೃತರ ದೇಹವನ್ನು ಸ್ವದೇಶಕ್ಕೆ ಹಿಂದಿರುಗಿಸುವುದು ಮತ್ತು ನ್ಯಾಯಾಲಯದ ಆದೇಶದ ದಿಯಾಧನ (BLOOD MONEY ) ಮುಂತಾದ ಸಾಮಾನ್ಯ ಪ್ರಕರಣಗಳನ್ನೂ ವಿಮೆ ಒಳಗೊಂಡಿದೆ. ವಿಮಾನ ವಿಳಂಬ ಪರಿಹಾರ ಮತ್ತು ಫ್ಲೈಟ್ ರದ್ದತಿ ಪರಿಹಾರವು ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.

error: Content is protected !! Not allowed copy content from janadhvani.com