janadhvani

Kannada Online News Paper

ಜಿಲ್ಲಾ ನ್ಯಾಯಾಧೀಶರಾಗಿ ಸಿರಾಜುದ್ದೀನ್ ಪ್ರಮಾಣ ವಚನ- ವಖ್ಫ್ ಅಧ್ಯಕ್ಷ ಶಾಫಿ ಸಅದಿ ಅಭಿನಂದನೆ

ಬೆಂಗಳೂರು: ಜಿಲ್ಲಾ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿರಾಜುದ್ದೀನ್ ಅವರಿಗೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಎನ್.ಕೆ.ಎಂ ಶಾಫಿ ಸಅದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜನವರಿ 3. 2023ರಂದು ಮಂಗಳೂರಿನ ಯುವ ವಕೀಲ ಸಿರಾಜುದ್ದೀನ್ ಜಿಲ್ಲಾ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು ಸಿರಾಜುದ್ದೀನ್ ಅವರಿಗೆ ಪ್ರಮಾಣವಚನ ಬೋಧಿಸಿದರು.