janadhvani

Kannada Online News Paper

ವಾಟ್ಸ್ಯಾಪ್ ನಲ್ಲಿ ಹೊಸ ಅಪ್ಡೇಟ್- ವಾಯ್ಸ್‌ ಮೆಸೇಜ್‌ ಸೇವ್ ಮಾಡುವ ಆಯ್ಕೆ

ನವದೆಹಲಿ: ಮೊಬೈಲ್ ಜಮಾನದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿರುವ ವಾಟ್ಸ್ಯಾಪ್ ಮೆಸೆಜಿಂಗ್‌ ಕಂಪನಿ ಸೇವ್ಡ್ ವಾಯ್ಸ್ ಮೆಸೇಜಸ್‌ ಎಂಬ ಹೊಸ ಆಯ್ಕೆ ಪರಿಚಯಿಸಿದೆ.

ಏನಿದೆ ಸುಧಾರಿತ ಆವೃತ್ತಿಯಲ್ಲಿ:

  • ಈ ಮೊದಲು ವಾಯ್ಸ್‌ ಮೆಸೇಜ್ ರೆಕಾರ್ಡ್‌ ಮಾಡುವ ವೇಳೆ ಚಾಟ್‌ನಲ್ಲಿಯೇ ಇರಬೇಕಿತ್ತು. ಆದರೆ ಈಗಿನ ಸುಧಾರಿತ ಆವೃತ್ತಿಯಲ್ಲಿ ಚಾಟ್‌ನಿಂದ ಹೊರಬಂದು ವಾಯ್ಸ್‌ ರೆಕಾರ್ಡ್‌ಅನ್ನು ಒಮ್ಮೆ ಕೇಳಿ ಕಳುಹಿಸಬಹುದಾಗಿದೆ. ಸಂದೇಶ ಕೇಳಲು ಹೋಮ್‌ ಸ್ಕ್ರೀನ್‌ಗೆ ಬರಬೇಕಾಗುತ್ತದೆ.
  • ವಾಯ್ಸ್‌ ರೆಕಾರ್ಡ್‌ ಮಾಡುವ ವೇಳೆ ಯಾವುದಾದರೂ ಕರೆ ಬಂದರೂ ಅಥವಾ ಬ್ಯಾಟರಿ ಚಾರ್ಜ್‌ ಮುಗಿದರೂ ಆ ವರೆಗಿನ ವಾಯ್ಸ್‌ ಮೆಸೇಜ್ ಸೇವ್ ಆಗಲಿದೆ. ಹಾಗಾಗಿ ಸಂದೇಶದ ಮಾತುಗಳನ್ನು ಮತ್ತೊಮ್ಮೆ ಉಲಿಯುವ ಪ್ರಯಾಸ ಪಡುವಂತಿಲ್ಲ.

error: Content is protected !! Not allowed copy content from janadhvani.com