janadhvani

Kannada Online News Paper

ನಿರುದ್ಯೋಗಿ ಸ್ವದೇಶಿಗಳಿಗೆ ಉದ್ಯೋಗ ಸೃಷ್ಟಿ-ವಿದೇಶೀಯರಿಗೆ ಹೊಡೆತ

ರಿಯಾದ್: ಚಿಲ್ಲರೆ ವಲಯದಲ್ಲಿ ನಿರುದ್ಯೋಗಿ ಸ್ವದೇಶಿಗಳಿಗೆ ಉದ್ಯೋಗವನ್ನು ಕಂಡುಕೊಳ್ಳಲಾಗುವುದು ಎಂದು ಸೌದಿ ಕಾರ್ಮಿಕ ಸಚಿವಾಲಯ ಹೇಳಿದೆ.ನಿರುದ್ಯೋಗಿಗಳ ಸಂಖ್ಯೆಯನ್ನು ನಾಲ್ಕು ವರ್ಷಗಳಲ್ಲಿ ಒಂಬತ್ತು ಶೇಕಡಾ ಕಡಿಮೆ ಮಾಡಲಾಗುವುದು.

ಚಿಲ್ಲರೆ ವಲಯಕ್ಕೆ ಮೂಲ ನಿವಾಸಿಗಳನ್ನು ಆಕರ್ಷಿಸಲು ಅನೇಕ ಯೋಜನೆಗಳನ್ನು ಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 2022 ರ ವೇಳೆಗೆ 12 ಲಕ್ಷ ಹೊಸ ಉದ್ಯೋಗಗಳನ್ನು ಸೃಷಿ ಮಾಡುವ  ಗುರಿ ಹೊಂದಿದೆಯೆಂದು ಸೌದಿ ಅರೇಬಿಯಾ  ಸಾಮಾಜಿಕ ವ್ಯವಹಾರಗಳ ಸಚಿವಾಲಯ ಹೇಳಿದೆ.ಇದು ಚಿಲ್ಲರೆ ವಲಯದಲ್ಲಿ ಕೆಲಸ ಮಾಡುವ ವಿದೇಶೀಯರಿಗೆ ಹೊಡೆತ ನೀಡಲಿದೆ.4 ವರ್ಷಗಳಲ್ಲಿ, ನಿರುದ್ಯೋಗವನ್ನು ಒಂಬತ್ತು ಶೇಕಡಕ್ಕೆ ಇಳಿಸಲಾಗುವುದು.

ಆಂತರಿಕ ವ್ಯವಹಾರಗಳ ಸಚಿವಾಲಯವು ಚಿಲ್ಲರೆ ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಹುಡುಕುತ್ತಿದೆ ಎಂದು ಸಚಿವಾಲಯದ ಅಂಡರ್ ಸೆಕ್ರೆಟರಿ ಅಹ್ಮದ್ ಖತ್ತಾನ್ ತಿಳಿಸಿದ್ದಾರೆ.ನಿರುದ್ಯೋಗಿಗಳಲ್ಲಿ ಹೆಚ್ಚಿನವರು ಉನ್ನತ ವಿಧ್ಯಾವಂತರಲ್ಲದಿದ್ದು, ಚಿಲ್ಲರೆ ವಲಯವು ಅವರಿಗೆ ಉತ್ತಮವಾಗಿದೆ ಎಂದು ಅವರು ಹೇಳಿದರು. ಸೌದಿ ಯುವಕರು ಮತ್ತು ಯುವತಿಯರನ್ನು ಆಕರ್ಷಿಸಲು ಸಚಿವಾಲಯ ಅನೇಕ ಯೋಜನೆಗಳನ್ನು ಯೋಜಿಸಿದೆ.ಮಹಿಳಾ ಸಿಬ್ಬಂದಿ ತರಬೇತಿ ಸೇರಿದಂತೆ ಸಾಕಷ್ಟು ವೇತನ ಮತ್ತು ಇತರ ಸವಲತ್ತನ್ನು ಖಚಿತಪಡಿಸುವುದು. ಸೆಪ್ಟೆಂಬರ್ ನಿಂದ  ಹನ್ನೆರಡು ಪ್ರದೇಶಗಳಲ್ಲಿ ಸಂಪೂರ್ಣ ದೇಶೀಕರಣವನ್ನು ಜಾರಿಗೊಳಿಸಲಾಗುವುದು ಎಂದು ಸಚಿವಾಲಯ ಈ ಹಿಂದೆ ತಿಳಿಸಿತ್ತು.

ಪೀಠೋಪಕರಣಗಳು, ವಾಹನಗಳ ಬಿಡಿಭಾಗಗಳು, ಕೈಗಡಿಯಾರಗಳು, ಕನ್ನಡಕ, ತಿಂಡಿಗಳು, ಸಿದ್ಧ ಉಡುಪುಗಳು ಇತ್ಯಾದಿಗಳನ್ನು ಮಾರಾಟ ಮಾಡುವ ಅಂಗಡಿಗಳು ಒಳಗೊಂಡಿವೆ.ಭಾರತೀಯರು ಸಮೇತ ಹಲವಾರು ವಿದೇಶಿಗರು ಪ್ರಸ್ತುತ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಜುವೆಲ್ಲರಿ ಮತ್ತು ಮೊಬೈಲ್ ಫೋನ್ ಮುಂತಾದ ವಲಯಗಳಲ್ಲಿ ಸ್ವದೇಶೀಕರಣ ಜಾರಿಗೊಳಿಸಲಾಗಿದೆ.

error: Content is protected !! Not allowed copy content from janadhvani.com