janadhvani

Kannada Online News Paper

KCF ಅಲ್ ಮುರೂಜ್ ಸೆಕ್ಟರ್ ಅಸ್ತಿತ್ವಕ್ಕೆ

ರಿಯಾದ್:( ಜನಧ್ವನಿ ವಾರ್ತೆ) ಕರ್ನಾಟಕ ಕಲ್ಚರ್ ಫೌಂಡೇಶನ್ (KCF) ರಿಯಾದ್ ಝೋನಲ್ ಅಧೀನದಲ್ಲಿ ಸಂಘಟನೆಯ ವ್ಯಾಪ್ತಿಗೆ ಬರುವ 11 ನೇ ಸೆಕ್ಟರ್ ಆಗಿ ಅಲ್ ಮುರೂಜ್ ಸೆಕ್ಟರ್ ಇತ್ತೀಚೆಗೆ ಅಸ್ತಿತ್ವಕ್ಕೆ ಬಂತು, ಹೊಸದಾಗಿ ರಚನೆಗೊಂಡ ಮುರ್ಸಲಾತ್,ದರಇಯ್ಯ, ಹಾಗೂ ದಲ್ಲ ಯುನಿಟ್ಗಳನ್ನು ಸೇರಿಸಿ ನೂತನ ಸೆಕ್ಟರ್ಗೆ ಚಾಲನೆ ನೀಡಲಾಯಿತು, ಈ ಕುರಿತಂತೆ ಅಲ್ ಮುರೂಜ್ ಇಸ್ತಿರಾಹೊಂದರಲ್ಲಿ ನಡೆದ ಸಮಾರಂಭವನ್ನು KCF ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ಲ ಸಖಾಫಿ ನಿಂತಿಕಲ್ಲು, ಉದ್ಘಾಟಿಸಿದರು,ಸುನ್ನೀ ಸಾಮಾಜಿಕ ಮುಂದಾಳು ಅಬ್ದುಲ್ ರಝಾಖ್ ಹಾಜಿ ಉಜಿರೆ ಅದ್ಯಕ್ಷತೆ ವಹಿಸಿದರು, KCF ಸೌದಿ ರಾಷ್ಟ್ರೀಯ ಸಂಘಟನಾ ವಿಭಾಗದ ಅದ್ಯಕ್ಷರಾದ ಸಿದ್ದೀಖ್ ಸಖಾಫಿ ಪೆರುವಾಯಿ ಪ್ರಾಸ್ತಾವಿಕ ಭಾಷಣ ಮಾಡಿದರು, KCF ಸೌದಿ ರಾಷ್ಟ್ರೀಯ ವೆಲ್ಫೇರ್ ವಿಭಾಗದ ಅದ್ಯಕ್ಷರಾದ ಸಲೀಮ್ ಕನ್ಯಾಡಿ, KCF ಬದಿಯ ಸೆಕ್ಟರ್ ಅಧ್ಯಕ್ಷ ಉಮರ್ ಹಾಜಿ ಅಳಕೆಮಜಲು, KCF ಒಲಯ ಸೆಕ್ಟರ್ ಅದ್ಯಕ್ಷರಾದ ಮುಸ್ತಫಾ ಝೈನಿ ಕಂಬಿಬಾಣೆ, KCF ಶಿಫಾ ಸೆಕ್ಟರ್ ಅದ್ಯಕ್ಷರಾದ ಯೂಸುಫ್ ಹಾಜಿ ಕಳಂಜಿಬೈಲು, KCF ರಬುವ ಸೆಕ್ಟರ್ ಅದ್ಯಕ್ಷರಾದ ಸಿರಾಜುದ್ದೀನ್ ವಳಾಲು,ಒಲಯ ಕಾರ್ಯದರ್ಶಿ ಹಕೀಮ್, ರಬುವ ಕಾರ್ಯದರ್ಶಿ PKM ಹನೀಫ್ ಉರುವಾಲು ಪದವು,ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು,

KCF ಅಲ್ ಮುರೂಜ್ ಸೆಕ್ಟರ್ಗೆ ನೂತನ ಅದ್ಯಕ್ಷರಾಗಿ PK ದಾವೂದ್ ಸಅದಿ ಉರುವಾಲು ಪದವು,ಪ್ರಧಾನ ಕಾರ್ಯದರ್ಶಿ BM ಅಬ್ದುಲ್ ಬಷೀರ್ ಮೊಡಂತಿಲ ಮೂರುಗೋಳಿ,ಕೋಶಾಧಿಕಾರಿ ಅಬ್ದುಲ್ ರಝಾಖ್ ಹಾಜಿ ಉಜಿರೆ,

(ಹಾಗೂ ಉಳಿದಂತೆ ವಿವಿಧ ಗುಂಪುಗಳಿಗೆ,)

(PK ಯಾಕುಬ್ ಮದನಿ ಉರುವಾಲು ಪದವು) (ಅದ್ಯಕ್ಷರು ಶಿಕ್ಷಣ ವಿಭಾಗ
(ಅಬ್ದುಲ್ ಮಜೀದ್ ಮುಡಿಪು ಕಾರ್ಯದರ್ಶಿ)

(ಅಬ್ದುಲ್ ರಝಾಖ್ ಉಜಿರೆ (ಅದ್ಯಕ್ಷರು ಸಂಘಟನಾ ವಿಭಾಗ)
(ನಾಸಿರ್ ಸರಳಿಕಟ್ಟೆ ಕಾರ್ಯದರ್ಶಿ)

(ಶಬೀರ್ BC Roof ಅದ್ಯಕ್ಷರು ಸಾಂತ್ವನ ವಿಭಾಗ)
(ರಷೀದ್ ಬೇಂಗಿಲ ಕಾರ್ಯದರ್ಶಿ)

(ರಫೀಕ್ ಸರಳಿಕಟ್ಟೆ ಅದ್ಯಕ್ಷರು ಪ್ರಕಾಶನ ವಿಭಾಗ)
(ಶಬೀರ್ ಸೂರಿಕುಮೇರ್ ಕಾರ್ಯದರ್ಶಿ)

(ಇಬ್ರಾಹಿಂ ಕುಕ್ಕಾಜೆ ಅದ್ಯಕ್ಷರು ಕಛೇರಿ ವಿಭಾಗ)
(ಅಮೀರ್ ಮಾಣಿ ಕಾರ್ಯದರ್ಶಿ)

ಹಾಗೂ 13 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು,

KCF ಝೋನಲ್ ಪ್ರತಿನಿಧಿಗಳಾಗಿ PK ದಾವೂದ್ ಸಅದಿ ಉರುವಾಲು ಪದವು , BM ಅಬ್ದುಲ್ ಬಷೀರ್ ಮೂರುಗೋಲು , ಅಬ್ದುಲ್ ರಝಾಖ್ ಹಾಜಿ ಉಜಿರೆ, ಅಬ್ದುಲ್ ಮಜೀದ್ ಮುಡಿಪು, ಇಬ್ರಾಹಿಂ ಕಟ್ಟತ್ತಾರು, ಅಬ್ದುಲ್ ರಝಾಖ್ ಉಜಿರೆ,ಇಬ್ರಾಹಿಂ ಕುಕ್ಕಾಜೆ,ಆಯ್ಕೆ ಗೊಂಡರು,
ಚುನಾವಣಾ ವೀಕ್ಷಕರಾಗಿ KCF ಝೋನಲ್ ಕಾರ್ಯದರ್ಶಿ ಬಷೀರ್ ತಲಪಾಡಿ ಆಗಮಿಸಿದರು,ಇದೇ ವೇಳೆ ಅಲ್ ಮುರೂಜ್ ಸೆಕ್ಟರ್ ನೂತನ ಅಧ್ಯಕ್ಷರಾಗಿ ಆಯ್ಕೆ ಆದ PK ದಾವೂದ್ ಸಅದಿ ಉರುವಾಲು ಪದವುರವರನ್ನು ಸೆಕ್ಟರ್ ವ್ಯಾಪ್ತಿಗೊಳಪಟ್ಟ ಮುರ್ಸಲಾತ್,ದಲ್ಲ, ದರಇಯ್ಯ ಯುನಿಟ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು, PK ದಾವೂದ್ ಸಅದಿ ಆರಂಭದಲ್ಲಿ ಸ್ವಾಗತಿಸಿ,ಕೊನೆಯಲ್ಲಿ BM ಬಷೀರ್ ದನ್ಯವಾದ ಹೇಳಿದ ನಂತರ ಮೂರು ಸ್ವಲಾತ್ನೊಂದಿಗೆ ಸಭೆಯು ಮುಕ್ತಾಯವಾಯಿತು,

error: Content is protected !! Not allowed copy content from janadhvani.com