janadhvani

Kannada Online News Paper

ಕೊರೋನಾ ಭೀತಿ: ಶಾಲಾ-ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯ- ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ

ಮಾಸ್ಕ್ ಹಾಕದೆ ಇದ್ದರೇ ಸದ್ಯಕ್ಕೆ ದಂಡ ಇಲ್ಲ.ಮುಖ್ಯಮಂತ್ರಿ ಜೊತೆ ಚರ್ಚಿಸಿ ದಂಡದ ಬಗ್ಗೆ ನಿರ್ಧಾರ.

ಬೆಳಗಾವಿ,ಡಿ.26: ಚೀನಾದಲ್ಲಿ ಕೋವಿಡ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಭಾರತದಲ್ಲೂ ಸೋಂಕು ಹರಡುವ ಭೀತಿ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ರಾಜ್ಯ ಸರ್ಕಾರ(Karnataka Government) ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಕೋವಿಡ್ ಮುನ್ನೆಚ್ಚರಿಕೆಯ ಕುರಿತು ನಡೆದ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾತಾನಾಡಿದ ಸಚಿವ ಆರ್. ಅಶೋಕ್(Revenue Minister R. Ashok) ಅವರು, ಶಾಲಾ ಕಾಲೇಜು, ಸಿನಿಮಾ ಮಂದಿರ, ಬಸ್, ರೈಲು, ವಿಮಾನ ಸೇರಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ನೂತನ ವರ್ಷಾಚರಣೆಯು(New Year Celebrations) ಡಿ.31 ರ ರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶವಿರುತ್ತದೆ. ಎಲ್ಲರೂ ನಿಯಮವನ್ನು ಪಾಲಿಸಬೇಕೆಂದು ಸೂಚನೆ ನೀಡಿದರು.

ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ (Health Minister Dr. Sudhakar) ಅವರು, ಒಳಾಂಗಣ ಕಾಯ ಕ್ರಮಗಳಲ್ಲಿ ಮಾಸ್ಕ್ ಕಡ್ಡಾಯವಾಗಿರುತ್ತದೆ. ನೂತನ ವರ್ಷಾಚರಣೆ ಹೊಟೇಲ್ ರೆಸಾರ್ಟ್, ರೆಸ್ಟೋರೆಂಟ್ ಗಳಲ್ಲೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಗ್ರಾಹಕರು ಮತ್ತು ಅಲ್ಲಿನ ಸಿಬ್ಬಂದಿ ಇದನ್ನು ಪಾಲಿಸಬೇಕು, ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿಲ್ಲ ಮುಂಜಾಗ್ರತಾ ಕ್ರಮವಹಿಸಬೇಕೆಂದು ಹೇಳಿದರು.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದರು. ಸುವರ್ಣ ಸೌಧದ ಸಮಿತಿ ಕೊಠಡಿಯಲ್ಲಿ ಇಂದು (ಡಿ.26) ಸಚಿವರಾದ ಆರ್ ಅಶೋಕ್ ಮತ್ತು ಸುಧಾಕರ್ ನೇತೃತ್ವದಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ವರ್ಚುವಲ್ ಮೂಲಕ ತಜ್ಞರ ಸಭೆ ನಡೆಯಿತು.

ಸಲಹಾ ಸಮಿತಿ ನೀಡಿದ ಸೂಚನೆಗಳೇನು?
ಸಲಹಾ ಸಮಿತಿಯವರು ವಿದೇಶದಿಂದ ಬರುವವರನ್ನು ಮಾನಿಟರ್ ಮಾಡಲು ಸಲಹೆ ನೀಡಿದ್ದಾರೆ. ಹೀಗಾಗಿ 2 ಆಸ್ಪತ್ರೆಗಳನ್ನು ಮೀಸಲಿಡುತ್ತೇವೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಎರಡು ಆಸ್ಪತ್ರೆಗಳನ್ನು ಅದಕ್ಕಾಗಿ ನಿಗದಿಪಡಿಸಲಾಗಿದೆ. ವಿದೇಶಿ ಪ್ರಯಾಣಿಕರನ್ನು ಬೆಂಗಳೂರು ಬೌರಿಂಗ್ ಹಾಗೂ ಮಂಗಳೂರಿನ ವೆನ್ಲಾಕ್ ನಲ್ಲಿ ಐಸೋಲೇಶನ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯ
ಶಾಲಾ-ಕಾಲೇಜ್ನ ತರಗತಿಗಳಗೆ ವಿದ್ಯಾರ್ಥಿಗಳು ಪ್ರವೇಶಕ್ಕೂ ಮುಂಚೆ ಸ್ಯಾನಿಟೈಸ್ ಮಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ
ಕಳೆದ ಬಾರಿಯಂತೆ ಈ ಬಾರಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಎಲ್ಲ ಆಸ್ಪತ್ರೆಗಳ ಪರಿಶೀಲನೆಗಾಗಿ ಕಮಿಟಿ ರಚನೆ ಮಾಡಲಾಗಿದೆ. ಆಕ್ಸಿಜನ್, ಐಸಿಯು ಬೆಡ್ ಪರಿಶೀಲನೆ ಮಾಡಬೇಕು.

ಮಾಸ್ಕ್ ಮತ್ತು ದಂಡ

ಮಾಸ್ಕ್ ಹಾಕದೆ ಇದ್ದರೇ ಸದ್ಯಕ್ಕೆ ದಂಡ ಇಲ್ಲ. ಸದ್ಯ ದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ದಂಡದ ಬಗ್ಗೆ ನಿರ್ಧಾರ.

ಏರ್ಪೋಟ್ ನಲ್ಲಿ ಕೊರೋನಾ ಪರೀಕ್ಷೆ
ಬೆಂಗಳೂರು, ಮಂಗಳೂರು ಏರ್ಪೋರ್ಟ್ನಲ್ಲಿ(Bengaluru and Mangalore International Airport) ರಾಂಡಮ್ ಆಗಿ 2% ಪ್ರಯಾಣಿಕರನ್ನು ಕೊರೊನಾ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಅಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ಕ್ವಾರಂಟೈನ್ ಮಾಡಲಾಗುವುದು. ಪಾಸಿಟಿವ್ ಬಂದರೆ ಜಿನೋಮಿಕ್ ಸಿಕ್ವೆನ್ಸಿಂಗ್ (genomic sequencing) ಕಳಿಸಲಾಗುವುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದರು.

ಬೂಸ್ಟರ್ ಡೋಸ್ ಕಡ್ಡಾಯವಲ್ಲ, ಅತ್ಯವಶ್ಯಕ
ಬೂಸ್ಟರ್ ಡೋಸ್(Booster Dose) ಹೆಚ್ಚಿನ ಜನರಿಗೆ ಕೊಡಲು ಕ್ರಮ ಕೈಗೊಳ್ಳುತ್ತೇವೆ. ಸದ್ಯ 21 ಪರ್ಸೆಂಟ್ ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ.21 ಪರ್ಸೆಂಟ್ ಇರೋದನ್ನು 50 ಪರ್ಸೆಂಟ್ಗೆ ಏರಿಸಬೇಕಿದೆ. ಸರ್ಕಾರದ ಜೊತೆ ಜನರು ಸಹಕಾರ ಕೊಡಬೇಕು. ಬೂಸ್ಟರ್ ಡೋಸ್ ಕಡ್ಡಾಯವಲ್ಲ, ಅತ್ಯವಶ್ಯಕವಾಗಿದೆ. ಕಡ್ಡಾಯ ಅಂತಾ ನಮ್ಮಲ್ಲಿ ಕಾನೂನು ಇಲ್ಲ. ಎರಡು ಡೋಸ್ ಅನ್ನೂ ಕಡ್ಡಾಯ ಮಾಡಿರಲಿಲ್ಲ. ಹೀಗಿದ್ದರೂ ಜನರು ಸ್ವಯಂ ಪ್ರೇರಣೆಯಿಂದ ಪಡೆದಿದರು. ಹೀಗಾಗಿ ಬೂಸ್ಟರ್ ಡೋಸ್ ಸಹ ಪಡೆಯಬೇಕು ಎಂದು ಸುಧಾಕರ್ ಮನವಿ ಮಾಡಿದರು.

error: Content is protected !! Not allowed copy content from janadhvani.com