janadhvani

Kannada Online News Paper

ನಾಳೆ ನಡೆಯುವುದು ಕೇವಲ ಪ್ರತಿಭಟನೆಯಲ್ಲ, ಬದುಕಿನ ಹಕ್ಕುಗಳಿಗಾಗಿ ಇರುವ ಹೋರಾಟ- SSF

ನಾಳೆ (ಡಿ.27) ಮಂಗಳೂರಿನಲ್ಲಿ ನಡೆಯಲಿಕ್ಕಿರುವುದು ಕೇವಲ ಪ್ರತಿಭಟನೆ ಯಲ್ಲ. ಬದುಕಿನ ಹಕ್ಕು ಪಡೆಯಲಿಕ್ಕಿರುವ ಬೃಹತ್ ಹಕ್ಕೊತ್ತಾಯ ಸಭೆಯಾಗಿದೆ.

ನಿರಂತರ ವಾಗಿ ಕರಾವಳಿ ಯಲ್ಲಿ ನಡೆಯುತ್ತಿರುವ ಅಮಾಯಕರ ಕೊಲೆ , ದೌರ್ಜನ್ಯ ದಿಂದ ಕಳೆದು ಹೋದ ನೆಮ್ಮದಿಯ ಮರುಸ್ಥಾಪನೆಯಾಗಿದೆ ಇದರ ಪ್ರಧಾನ ಉದ್ದೇಶ.ಈ ಹಕ್ಕೊತ್ತಾಯ ಸಭೆಯನ್ನು ಕರ್ನಾಟಕ ಉಲಮಾ ಒಕ್ಕೂಟದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ SSF,SYS, ಕರ್ನಾಟಕ ಮುಸ್ಲಿಂ ಜಮಾಅತ್ ಇದರ ರಾಜ್ಯ ಸಮಿತಿಯ ನಿರ್ದೇಶನದಂತೆ ದ.ಕ ಕನ್ನಡ ಜಿಲ್ಲಾ ಸಮಿತಿ ಗಳು ಬಹಳಷ್ಟು ಯಶಸ್ವಿ ಯಾಗಿ ನಡೆಸಲಿದೆ.

ನಮ್ಮೆಲ್ಲ ಕಾರ್ಯಕರ್ತರು ಬೃಹತ್ ಮಟ್ಟದಲ್ಲಿ ಬಂದು ಸೇರಲಿದ್ದಾರೆ..ಆದರೆ ಸಂಪೂರ್ಣ ಶಾಂತಿಯುತ ಸಂಗಮವಾಗಿದ್ದು ಯಾವುದೇ ಆತಂಕ ಕಕ್ಕೆ ಆಸ್ಪದವಿರುವುದಿಲ್ಲ ವೆಂದು SSF ರಾಜ್ಯಾಧ್ಯಕ್ಷ ರಾದ ಅಬ್ದುಲ್ ಲತೀಫ್ ಸ‌ಅದಿ ಶಿವಮೊಗ್ಗ ಹೇಳಿದರು.SSF ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ ಮಾತನಾಡಿ, ಕೊಲೆಗಡುಕರು ಯಾವುದೇ ಧರ್ಮದ ವಕ್ತಾರರಲ್ಲ, ಅವರು ಗಾಂಜಾದ ವಾಹಕರು.ರಾಕ್ಷಸಿಗಳಿಗೆ ಧರ್ಮ ವಿರುವುದಿಲ್ಲ.

ನಾಳೆ ಮಾನವೀಯತೆಯ ಪ್ರೇಮಿಗಳೆಲ್ಲರೂ ಜೊತೆ ಯಾಗಿ ಹೋರಾಡಲಿದ್ದಾರೆ.ಕರಾವಳಿಯ ಶಾಂತಿ ಯನ್ನು ಬಯಸುವವರು ನಮ್ಮೊಂದಿಗೆ ಜೊತೆ ಸೇರಲಿದ್ದು ಸಂಪೂರ್ಣ ಯಶಸ್ವಿಯಾಗಲಿದೆ ಎಂದು ತಿಳಿಸಿದರು.