janadhvani

Kannada Online News Paper

ಹುರೂಬ್‌ನಲ್ಲಿರುವ ವಲಸಿಗರು 15 ದಿನಗಳೊಳಗೆ ಪ್ರಾಯೋಜಕತ್ವ ಬದಲಾವಣೆ ಮಾಡಬೇಕು

ದೇಶದಲ್ಲಿ ಕಾರ್ಮಿಕ ಕಾನೂನುಗಳಲ್ಲಿ ಮಾಡಿದ ಸುಧಾರಣೆಗಳ ಭಾಗವಾಗಿ ಸಚಿವಾಲಯವು ವಿವರಣೆಯನ್ನು ನೀಡಿದೆ.

ರಿಯಾದ್: ಪರಾರಿಯಾದ (ಹುರೂಬ್) ವಿದೇಶಿ ಉದ್ಯೋಗಿಗಳು 15 ದಿನಗಳೊಳಗೆ ಪ್ರಾಯೋಜಕತ್ವ ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅನಿವಾರ್ಯ ಎಂದು ಸೌದಿ ಮಾನವ ಸಂಪನ್ಮೂಲ ಸಚಿವಾಲಯವು (Ministry of Human Resources and Social Development) ಹೇಳಿದೆ. ಈ ಕಾಲಮಿತಿಯೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ಕಾರ್ಮಿಕರು ಹುರುಬ್‌ನಲ್ಲಿಯೇ ಇರುತ್ತಾರೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕಾರ್ಮಿಕ ಕಾನೂನುಗಳಲ್ಲಿ ಮಾಡಿದ ಸುಧಾರಣೆಗಳ ಭಾಗವಾಗಿ ಸಚಿವಾಲಯವು ವಿವರಣೆಯನ್ನು ನೀಡಿದೆ. ಕೆಲಸಕ್ಕೆ ಗೈರುಹಾಜರಾಗಿರುವುದಾಗಿ(ಹುರೂಬ್) ಉದ್ಯೋಗದಾತರು (Sponsor) ದಾಖಲಿಸಿರುವ ವಿದೇಶಿ ಉದ್ಯೋಗಿಗಳಿಗೆ ಪ್ರಾಯೋಜಕತ್ವ ಬದಲಾವಣೆಗೆ ಗರಿಷ್ಠ ಹದಿನೈದು ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.

ಹುರೂಬ್ ಪ್ರಕ್ರಿಯೆಗಳಲ್ಲಿ ಸಡಿಲಿಕೆ ಕೋರಿ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದಾಗ, ವರ್ಗಾವಣೆಗೆ ಸಚಿವಾಲಯವು ಅನುಮೋದನೆ ನೀಡಿದ ನಂತರ ನಿಗದಿತ ಕಾಲಮಿತಿ ಅನ್ವಯಿಸುತ್ತದೆ.

ಪ್ರಾಯೋಜಕತ್ವದ ಬದಲಾವಣೆಯ ಸಂದರ್ಭದಲ್ಲಿ ಹೊಸ ಪ್ರಾಯೋಜಕರು ಉದ್ಯೋಗಿಯ ಅಸ್ತಿತ್ವದಲ್ಲಿರುವ ಬಾಕಿ ಮೊತ್ತಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಹುರುಬ್ ಅನ್ನು ದಾಖಲಿಸಿರುವುದರಿಂದ ಹಳೆಯ ಪ್ರಾಯೋಜಕರಿಗೆ ಕೆಲಸಗಾರನ ಮೇಲೆ ಯಾವುದೇ ಹೊಣೆಗಾರಿಕೆ ಉಳಿಯುವುದಿಲ್ಲ ಎಂದು ಸಚಿವಾಲಯ ವಿವರಿಸಿದೆ.

error: Content is protected !! Not allowed copy content from janadhvani.com