ಮಂಗಳೂರು : ಸಂಘಟನೆಗಳಲ್ಲಿ ಹುದ್ದೆಗಳ ಜವಾಬ್ದಾರಿ ಹೊರುವವರು ಅದನ್ನು ನಿರ್ವಹಿಸದೆ ಇದ್ದರೆ ಅದು ಸಮಾಜಕ್ಕೆ ಮಾಡುವ ವಂಚನೆಯೇ ಸರಿ ಮಾತ್ರವಲ್ಲ ಸೃಷ್ಟಿಕರ್ತನ ಅಪಕೃಪೆಗೆ ಪಾತ್ರರಾಗುವ ಸಾಧ್ಯತೆ ಇದೆ ಎಂದು ಕೇರಳ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು. ಅವರು ಮಂಗಳೂರಿನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಜಮಾಅತ್ ಇದರ ರಾಜ್ಯ ಮಹಾಸಭೆಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ ಸುನ್ನೀ ಸಂಘ ಕುಟುಂಬದ ‘ಪುನರ್-ನಿರ್ಮಾಣ’ ಪ್ರಕ್ರಿಯೆ ಚಾಲನೆಯಲ್ಲಿದ್ದು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್ ಇನ್ನು ಮುಂದೆ ಕೇರಳ ಮಾದರಿಯಲ್ಲಿ ಮುಸ್ಲಿಂ ಜಮಾಅತಿನ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಯಾಗಿ ಕಾರ್ಯಾಚರಿಸಲಿದೆ ಎಂದು ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಕೆ.ಪಿ.ಹುಸೈನ್ ಸ ಅದಿ ತಿಳಿಸಿದರು.
ಅವರು ಮಹಾಸಭೆಯನ್ನು ಉದ್ಘಾಟಿಸುತ್ತಾ ಮಾತನಾಡಿ ಮುಸ್ಲಿಂ ಜಮಾಅತನ್ನು ಬಲಪಡಿಸಲು ಕರ್ನಾಟಕ ಸುನ್ನೀ ಸಂಘ ಕುಟುಂಬದ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು. ಸುನ್ನಿ ಜಂಇಯ್ಯತುಲ್ ಉಲಮಾ ಕರ್ನಾಟಕ ಅಧ್ಯಕ್ಷ ರಾದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಭೆಯ ಅಧ್ಯಕ್ಷತೆ ವಹಿಸಿದರು.
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮತ್ತು ಮುಸ್ಲಿಂ ಜಮಾಅತ್ ನಿಕಟಪೂರ್ವ ಅಧ್ಯಕ್ಷ ಶಾಫಿ ಸ ಅದಿ ಮುನ್ನುಡಿ ಭಾಷನಗೈದರು. ಸಭೆಯಲ್ಲಿ ಎಂಬಿ ಸಾದಿಕ್ ಮಾಸ್ಟರ್ ಮಲೆಬೆಟ್ಟು ವರದಿ ವಾಚಿಸಿದರು. ಅಶ್ರಫ್ ಕಿನಾರ ಮಂಗಳೂರು ಲೆಕ್ಕ ಪತ್ರ ಮಂಡಸಿದರು. ಮುಂದಿನ ಎರಡು ವರ್ಷಗಳ ಅವಧಿಗೆ ಮುಸ್ಲಿಂ ಜಮಾಅತನ್ನು ಪುನರ್ರಚಿಸಲಾಗಿದ್ದು.
ಗೌರವಾಧ್ಯಕ್ಷರಾಗಿ ಮುಫ್ತಿ ಎ ಕರ್ನಾಟಕ ಮುಫ್ತಿ ಅನ್ವರಲಿ ಸಾಹಿಬ್ ರಾಮನಗರ ಬೆಂಗಳೂರು , ಅಧ್ಯಕ್ಷ ರಾಗಿ ಮೌಲಾನಾ ಮುಹಮ್ಮದ್ ಪಾಝಿಲ್ ರಝ್ವಿ ಕಾವಲ್ ಕಟ್ಟೆ ,ಪ್ರಧಾನ ಕಾರ್ಯದರ್ಶಿಯಾಗಿ ಎಚ್ ಐ ಅಬೂಸುಫ್ ಯಾನ್ ಮದನಿ, ಕೋಶಾಧಿಕಾರಿಯಾಗಿ ಹಾಜಿ ಇಕ್ಬಾಲ್ ಹಬೀಬ್ ಸೇಟ್ ಶಿವಮೊಗ್ಗ ರವರನ್ನು ಆರಿಸಲಾಯಿತು.
ಉಪಾಧ್ಯಕ್ಷ ರುಗಳಾಗಿ ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಸಯ್ಯಿದ್ ಇಸ್ಮಾಯಿಲ್ ತಂಞಲ್ ಮದನಿ ಉಜಿರೆ,ಎನ್ ಕೆ ಎಂ ಶಾಫಿ ಸ ಅದಿ ಬೆಂಗಳೂರು,ರಾಜೇಶ್ ಮುಹಮ್ಮದ್ ಹಾಜಿ ಸಾಗರ,ಸಯ್ಯಿದ್ ಸೈಪುಲ್ಲಾ ಸಾಬ್ ದಾವಣಗೆಯವರನ್ನೂ,
ಕಾರ್ಯದರ್ಶಿಗಳಾಗಿ ಅಬ್ದುಲ್ ಹಮೀದ್ ಬಜಪೆ, ಎಂಬಿಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಎಚ್ ಸುಬ್ ಹಾನ್ ಅಹ್ಮದ್ ಹೊನ್ನಾಳ ಉಡುಪಿ, ಯೂಸುಫ್ ಹಾಜಿ ಉಪ್ಪಳ್ಳಿ ಚಿಕ್ಕಮಗಳೂರು, ಅಬ್ದುಲ್ ಲತೀಫ್ ಸೂಂಠಿಕೊಪ್ಪ ಮಡಿಕೇರಿಯವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರು ಗಳಾಗಿ ಯುಕೆ ಮುಹಮ್ಮದ್ ಸ ಅದಿ ವಳವೂರು, ಕೆ ಸ್ ಸಾದುಲಿ ಪೈಝಿ ಕೊಟ್ಟಮುಡಿ,ಎಸ್ ಪಿ ಹಂಝ ಸಖಾಫಿ ಬಂಟ್ವಾಳ,ಪಿ ಎಂ ಉಸ್ಮಾನ್ ಸ ಅದಿ ಪಟ್ಟೋರಿ,ಜಿ ಎಂ ಕಾಮಿಲ್ ಸಖಾಫಿ,ತೋಕೆ ಮುಹ್ ಯುದ್ದೀನ್ ಕಾಮಿಲ್ ಸಖಾಫಿ, ಡಾ. ಎಂ ಎಸ್ ಎಂ ಝೈನೀ ಕಾಮಿಲ್ ಸಖಾಫಿ,ಎಂಪಿ ಎಂ ಅಶ್ರಫ್ ಸ ಅದಿ ಮಲ್ಲೂರು, ಬಿ ಎಂ ಮುಮ್ತಾಜ್ ಅಲಿ ಕೃಷ್ಣಾಪುರ, ಅಶ್ರಫ್ ಕಿನಾರ ಮಂಗಳೂರು,ನೇಜಾರು ಅಬೂಬಕ್ಕರ್ ಹಾಜಿ ಉಡುಪಿ,,ಎ ಎಚ್ ಅಬೂಬಕ್ಕರ್ ಹಾಜಿ ಸಕಲೇಶಪುರ ಹಾಸನ,ಬಿ ಎಂ ಉಮರ್ ಹಾಜಿ ಅಭಿಮಾನ್ ಬೆಂಗಳೂರು,ನವಾಝ್ ಅಹ್ಮದ್ ಅಶ್ರಫಿ ಬಳ್ಳಾರಿ,ಅಡ್ವಕೇಟ್ ಕುಂಞ ಅಬ್ಬುಲ್ಲ ಮಡಿಕೇರಿ,ಅಬ್ದುಲ್ ರಹಿಮಾನ್ ನ್ಯಾಷನಲ್ ಶಿವಮೊಗ್ಗ,ಜಿ ಯಾಕುಬ್ ಯೂಸುಫ್ ಬೆಂಗಳೂರು,ಎಂಬಿ ಹಮೀದ್ ಮಡಿಕೇರಿ, ಅಬ್ದುಲ್ ಕರೀಮ್ ಮುಹ್ಸಿನ್ ರಿಫಾಯಿ ಹಾವೇರಿ ಇವರನ್ನು ಆಯ್ಕೆ ಮಾಡಲಾಯಿತು. ಎಸ್ ಪಿ ಹಂಝ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.