ಮುಡಿಪು :ಕರ್ನಾಟಕ ರಾಜ್ಯ ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ಎಸ್ ಜೆ.ಎಂ.ದಕ್ಷಿಣ ಕನ್ನಡ ಜಿಲ್ಲೆ ಇದರ ವೆಸ್ಟ್ ವಿಭಾಗದ ಮದ್ರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಾಹಿತ್ಯ ಸ್ಪರ್ಧೆ ಪ್ರತಿಭಾ ಸಂಗಮ “ಭರವಸೆಯ ಚಿಗುರು”ಎಂಬ ಘೋಷವಾಕ್ಯದೊಂದಿಗೆ
ಇತ್ತೀಚೆಗೆ ಇರಾ ಬಾಳೆಪುಣಿ ಮದ್ರಸ ವಠಾರದಲ್ಲಿ ನಡೆಯಿತು.
ಬಾಳೆಪುಣಿ ಜಮಾಅತ್ ಅಧ್ಯಕ್ಷ ಬಿ.ಎಸ್.ಮುಹಮ್ಮದ್ ಹಾಜಿ ಧ್ವಜಾರೋಹಣ ಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಭಾ ಸಂಗಮ ಸ್ವಾಗತ ಸಮಿತಿ ಚೇರ್ಮನ್ ಇಬ್ರಾಹಿಂ ಖಲೀಲ್ ಮಾಲಿಕಿ ಬೋಳಂತೂರು ರವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ಎಸ್.ಜೆ.ಎಂ ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಉದ್ಘಾಟಿಸಿದರು.
ಪ್ರತಿಭಾ ಸಂಗಮದಲ್ಲಿ 19 ರೇಂಜ್ ಗಳ ಒಂದು ಸಾವಿರಕ್ಕೂ ಹೆಚ್ಚಿನ ಸ್ಪರ್ಧಾರ್ಥಿಗಳು ಜೂನಿಯರ್, ಸೀನಿಯರ್ ಮತ್ತು ಜನರಲ್ ವಿಭಾಗವಾಗಿ
ಐದು ಭಾಷೆಗಳಲ್ಲಿ ವೇದಿಕೆ ಮತ್ತು ವೇದಿಕೇತರವಾಗಿ ನಡೆದ ಸ್ಪರ್ಧೆಯಲ್ಲಿ ಭಾಷಣ, ಹಾಡು, ಪ್ರಬಂಧ, ಪದಬಂಧ ಕ್ವಿಝ್, ಸಯನ್ಸ್ ಮೋಡಲ್ ಸೇರಿದಂತೆ 74 ವಿಷಯಗಳಲ್ಲಿ ತನ್ನ ಪ್ರತಿಭೆಗಳನ್ನು ಪ್ರದರ್ಶಿಸಿದರು.ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗಳು ರಾಜ್ಯಮಟ್ಟದ ಪ್ರತಿಭಾ ಸಂಗಮದಲ್ಲಿ ಸ್ಪರ್ಧಿಸಲಿದ್ದಾರೆ.
ಆದಿತ್ಯವಾರ ಸಂಜೆ ಎಸ್.ಜೆ.ಎಂ ಜಿಲ್ಲಾಧ್ಯಕ್ಷ ಪಿ.ಎಂ.ಮುಹಮ್ಮದ್ ಮದನಿ ಕೆ.ಸಿ.ರೋಡ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭ ವನ್ನು ಬಾಳೆಪುಣಿ ಮುದರ್ರಿಸ್ ಮುಹಮ್ಮದ್ ಅಲಿ ಫೈಝಿ ಉದ್ಘಾಟಿಸಿದರು.ಸುರತ್ಕಲ್ ರೇಂಜ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಚಾಂಪ್ಯನ್ ಆಗಿ ಹೊರಹೊಮ್ಮಿತು. ಮುಡಿಪು ರೇಂಜ್ ದ್ವಿತೀಯ ಸ್ಥಾನ ಹಾಗೂ ಬಂಟ್ವಾಳ ರೇಂಜ್ ತೃತೀಯ ಸ್ಥಾನ ಪಡೆಯಿತು.
ವೇದಿಕೆಯಲ್ಲಿ ವಿಜೇತ ರೇಂಜ್ ಮತ್ತು ಸ್ಪರ್ಧಾರ್ಥಿಗಳಿಗೆ ಟ್ರೋಫಿ ಹಾಗೂ ಬಹುಮಾನ ವಿತರಿಸಲಾಯಿತು.ದೇರಳಕಟ್ಟೆ ರೇಂಜ್ ನ ಮುಹಮ್ಮದ್ ಇಫಾಝ್ ಮತ್ತು ಮುಹಮ್ಮದ್ ರಬೀಹ್ ಕ್ರಮವಾಗಿ ಜನರಲ್, ಸೀನಿಯರ್ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಆಯ್ಕೆಗೊಂಡರೆ ಜೂನಿಯರ್ ವಿಭಾಗದಲ್ಲಿ ಸಾಲೆತ್ತೂರು ರೇಂಜ್ ನ ಕಟ್ಟತ್ತಿಲ ಮದ್ರಸ ವಿದ್ಯಾರ್ಥಿ ರಹ್ಫಾನ್ ಕಲಾ ಪ್ರತಿಭೆಯಾಗಿ ಮೂಡಿಬಂದರು.ಇಫಾಝ್,ರಬೀಹ್ ಇಬ್ಬರೂ ದೇರಳಕಟ್ಟೆ ನಾಟೆಕಲ್ ರಹ್ಮಾನಿಯ ಮದ್ರಸ ವಿದ್ಯಾರ್ಥಿಗಳಾಗಿದ್ದಾರೆ ಎಂಬುದು ವಿಶೇಷ.
ಮುಖ್ಯ ಅತಿಥಿಗಳಾಗಿ ಎಸ್.ಜೆ.ಎಂ ರಾಜ್ಯ ಕಾರ್ಯದರ್ಶಿ ಕೆ.ಕೆ.ಎಂ ಕಾಮಿಲ್ ಸಖಾಫಿ, ರಾಜ್ಯ ಪ್ರತಿಭಾ ಸಂಗಮ ಚಯರ್ಮ್ಯಾನ್ ಹಾಫಿಳ್ ಹನೀಫ್ ಮಿಸ್ಬಾಹಿ ರಾಜ್ಯ ಪ್ರತಿಭಾ ಸಂಗಮ ಜನರಲ್ ಕನ್ವೀನರ್ ಇಬ್ರಾಹಿಂ ನಈಮಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಪದವು ಎಸ್.ಎಂ.ಎ. ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಅಡ್ಯಾರ್ ಪದವು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರಾಜ್ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹಸೈನಾರ್ ಕಟ್ಟತ್ತಿಲ, ಬಾಳೆಪುಣಿ ಓಲ್ಡ್ ಸ್ಟೂಡೆಂಟ್ಸ್ ಅಧ್ಯಕ್ಷ ಅಬ್ದುಲ್ಲ ಮುಸ್ಲಿಯಾರ್,ಎಸ್.ಎಂ.ಎ ಸಾಲೆತ್ತೂರು ರೀಜಿನಲ್ ಅಧ್ಯಕ್ಷ ಸಿ.ಎಚ್ ಮುಹಮ್ಮದ್ ಹಾಜಿ.ಎಸ್.ಜೆ.ಎಂ. ಮುಡಿಪು ರೇಂಜ್ ಅಧ್ಯಕ್ಷ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಬೊಳ್ಮಾರ್.
ಎಸ್.ಜೆ.ಎಂ ಸಾಲೆತ್ತೂರು ರೇಂಜ್ ಅಧ್ಯಕ್ಷ ಸಿದ್ದೀಕ್ ಸಅದಿ, ವರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಶ್ರಫ್,ಬಾಳೆಪುಣಿ ಜಮಾಅತ್ ಮಾಜಿ ಅಧ್ಯಕ್ಷ ಎಂ.ಬಿ.ಅಬೂಬಕರ್ ಸಖಾಫಿ ಬಾಳೆಪುಣಿ ಮುಂತಾದವರು ಉಪಸ್ಥಿತರಿದ್ದರು.
ಎಸ್.ಜೆ.ಎಂ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಸ್ವಾಗತಿಸಿ, ಪ್ರತಿಭಾ ಸಂಗಮ ಕನ್ವೀನರ್ ಅಕ್ಬರ್ ಅಲಿ ಮದನಿ ಕೃತಜ್ಞತೆ ಸಲ್ಲಿಸಿದರು.