ಸೌದಿ ಅರೇಬಿಯಾ: ಜಿದ್ದಾದಲ್ಲಿ ಮೃತಪಟ್ಟ ಯಾಕೂಬ್ ಸಕಲೇಶಪುರ ಎಂಬವರ ಅಂತ್ಯಕ್ರಿಯೆಯು ನವೆಂಬರ್ 6 ಭಾನುವಾರ (ಇಂದು) ಜಿದ್ದಾದ ಬಾಬ್ ಮಕ್ಕಾದಲ್ಲಿರುವ ಮಖ್ಬರ ಅಲ್ ಅಸದ್ ನಲ್ಲಿ ಕುಟುಂಬಸ್ತರು ,ಸ್ನೇಹಿತರು ಹಾಗೂ ಕೆಸಿಎಫ್ ನ ನೇತಾರರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಸೌದಿ ಅರೇಬಿಯಾದಲ್ಲಿ ಹೌಸ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ 04/11/2021 ರಂದು ಮೃತಪಟ್ಟಿದ್ದಾರೆ.
ಮರಣ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತರಾದ ಕೆಸಿಎಫ್ ಶರಫಿಯ್ಯ ಸೆಕ್ಟರ್ ಹಾಗೂ ಜಿದ್ದಾ ಝೋನ್ ಸಾಂತ್ವನ ಇಲಾಖೆಯ ನೇತಾರರಾದ ನಾಸಿರ್ ಹೆಚ್ಕಲ್ ಹಾಗೂ ಫಾರೂಕ್ ಬಂಟ್ವಾಳ , ಮದೀನಾ ಝೋನ್ ನೇತಾರರಾದ ರಝಾಕ್ ಉಳ್ಳಾಲ ಹಾಗೂ ಸಂಬಂಧಿಕರಾದ ರಹೀಂ ದುಬೈ ರವರು ಮೃತರ ಅಂತ್ಯ ಸಂಸ್ಕಾರಕ್ಕೆ ಬೇಕಾದ ದಾಖಲೆ ಪತ್ರಗಳು ,ಭಾರತೀಯ ರಾಯಭಾರಿ ಕಚೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಸಿದ್ಧಪಡಿಸಿ ಮಯ್ಯತ್ ದಫನ ಕಾರ್ಯ ಶೀಘ್ರ ಗತಿಯಲ್ಲಿ ನಡೆಸಲು ಸಹಕರಿಸಿದರು.
ಮಯ್ಯತ್ ದಫನ ಕಾರ್ಯದಲ್ಲಿ ಶರಫಿಯ್ಯಾ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಲ್, ಹಮೀದ್ ಹಾಜಿ ಸಾಗರ್ ,ಮೊಯ್ದೀನ್ ಕುದ್ರೋಳಿ , ಮುಹಮ್ಮದ್ ಕುಕ್ಕಾಜೆ,ಯೂಸೂಫ್ ಕುಕ್ಕಾಜೆ,ರಫೀಕ್ ಎರ್ಮಾಳ್,ಫೈಝಲ್ ಸಕಲೇಶಪುರ ಸೇರಿದಂತೆ ಕೆಸಿಎಫ್ ಕಾರ್ಯಕರ್ತರು ಹಾಗೂ ಹಿತೈಸಿಗಳು ಭಾಗವಹಿಸಿದ್ದರು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ