ಗಲ್ಫ್ ಗೈಸ್ ಬಡಕಬೈಲ್ ಇದರ 5ನೇ ವಾರ್ಷಿಕ ಮಹಾಸಭೆಯು ದಿನಾಂಕ: 04-11-2022 ಶುಕ್ರವಾರ ಜುಮುಆ ಬಳಿಕ ಸೌದಿ ಸಮಯ 2:00 ಗಂಟೆಗೆ ಸರಿಯಾಗಿ ಸಮಿತಿ ಅದ್ಯಕ್ಷರಾದ ನಝೀರ್ ಗಾಣೆಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಹೈದರ್ ಹಾಫಿಳ್ ದುಬೈ ದುಆ ಮೂಲಕ ಸಭೆಗೆ ಚಾಲನೆ ನೀಡಿದರು, ಪ್ರ.ಕಾರ್ಯದರ್ಶಿ ಖಲೀಲ್ ಗರ್ಗಲ್ ಸಭೆಗೆ ಸ್ವಾಗತ ಕೋರಿದರು.
2022-2023 ಸಾಲಿನ ನೂತನ
ಗೌರವಾಧ್ಯಕ್ಷರು: ರಹೀಂ ಸಅದಿ ಖತರ್
ಅಧ್ಯಕ್ಷರು: ಅಶ್ರಫ್ ದುಬೈ
ಪ್ರ,ಕಾರ್ಯದರ್ಶಿ: ಅಝ್ವೀರ್ ಗಾಣೆಮಾರ್
ಕೋಶಾಧಿಕಾರಿ: ಖಲೀಲ್ ಗರ್ಗಲ್
ಉಪಾಧ್ಯಕ್ಷರು: ಮುಹಿಯ್ಯದ್ದೀನ್ ದಮ್ಮಾಮ್ & ಶೆರೀಫ್ ಗಾಣೆಮಾರ್
ಜೊ.ಕಾರ್ಯದರ್ಶಿ: ಇನ್ಹಾಮ್ ಖತರ್
ಚುಣಾವಣಾ ಉಸ್ತುವಾರಿಗಳಾಗಿ ರಹೀಂ ಸಅದಿ ಖತರ್ ಹಾಗು ತೌಹೀದ್ ಗಾಣೆಮಾರ್ ರವರು
ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷರು ಮಾತನಾಡಿ ಗಲ್ಫ್ ಗೈಸ್ ಬಡಕಬೈಲ್ ಕಮಿಟಿ ರಚನೆಯಾದ ಉಧ್ದೇಶವನ್ನು ವಿವರಿಸಿ ನೂತನ ಸಮಿತಿಯೊಂದಿಗೆ ಪ್ರತೀಯೊಬ್ಬ ಸದಸ್ಯರು ಸಹಕರಿಸಬೇಕೆಂದು ತಿಳಿಸಿ ಸಮಿತಿಯ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಮಾಡಿದರು.
ನೂತನ ಪ್ರಧಾನ ಕಾರ್ಯದರ್ಶಿ ಅಝ್ವೀರ್ ಗಾಣೆಮಾರ್ ಎಲ್ಲರಿಗು ಧನ್ಯವಾದ ಹೇಳಿ 3 ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.