janadhvani

Kannada Online News Paper

ಯುಎಇ: ವೀಸಾ ಅವಧಿ ಮುಗಿದು ದೇಶ ತೊರೆಯದಿರುವವರಿಗೆ ಏಕೀಕೃತ ದಂಡ

ನಿವಾಸ ವೀಸಾದಲ್ಲಿರುವವರಿಗೆ ಅವಧಿ ಮೀರಿದ ದಂಡವನ್ನು ದ್ವಿಗುಣಗೊಳಿಸಲಾಗಿದೆ. ಅವರು ಪ್ರತಿದಿನ 50 ದಿರ್ಹಮ್‌ಗಳ ದಂಡವನ್ನು ಪಾವತಿಸಬೇಕಾಗುತ್ತದೆ.

ಅಬುಧಾಬಿ:ಯುಎಇಯಲ್ಲಿ ವೀಸಾ ಅವಧಿ ಮುಗಿದ ನಂತರ ದೇಶವನ್ನು ತೊರೆಯದವರಿಗೆಗಾಗಿ ದಂಡವನ್ನು ಏಕೀಕರಿಸಲಾಗಿದೆ. ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಮತ್ತು ಸಿಟಿಜನ್‌ಶಿಪ್(Federal Authority for identity and citizenship), ಕಸ್ಟಮ್ಸ್ ಮತ್ತು ಪೋರ್ಟ್ ಸೆಕ್ಯುರಿಟಿ, ದರಗಳಲ್ಲಿನ ಬದಲಾವಣೆಯ ಕುರಿತು ಹೊಸ ಅಧಿಸೂಚನೆಯನ್ನು ಹೊರಡಿಸಿದೆ.

ಪ್ರವಾಸಿ ವೀಸಾ(Tourist Visa) ಅಥವಾ ವಿಸಿಟ್ ವೀಸಾ(Visit Visa) ದಲ್ಲಿ ಯುಎಇಗೆ ಪ್ರವೇಶಿಸಿದವರು ಮತ್ತು ವೀಸಾ ಅವಧಿ ಮುಗಿದ ನಂತರ ದೇಶದಲ್ಲಿ ಉಳಿದುಕೊಂಡಿರುವವರು ಪ್ರತಿ ದಿನವೂ 50 ದಿರ್ಹಂ ದಂಡವನ್ನು ಪಾವತಿಸಬೇಕಾಗುತ್ತದೆ. ಮೊದಲು ಇದು ದಿನಕ್ಕೆ 100 ದಿರ್ಹಂ ಆಗಿತ್ತು. ಅದೇ ಸಮಯದಲ್ಲಿ, ನಿವಾಸ ವೀಸಾದಲ್ಲಿರುವವರಿಗೆ ಅವಧಿ ಮೀರಿದ ದಂಡವನ್ನು ದ್ವಿಗುಣಗೊಳಿಸಲಾಗಿದೆ. ಅವರು ಪ್ರತಿದಿನ 50 ದಿರ್ಹಮ್‌ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಈ ಹಿಂದೆ, ನಿವಾಸ ವೀಸಾಗಳಿಗೆ ಹೆಚ್ಚುವರಿಯಾಗಿ ಉಳಿಯುವ ದಂಡವು ದಿನಕ್ಕೆ 25 ದಿರ್ಹಂ ಆಗಿತ್ತು.

ಹೊಸ ಶುಲ್ಕದ ಬಗ್ಗೆ ಅಧಿಕಾರಿಗಳು ದೇಶಾದ್ಯಂತ ಟೈಪಿಂಗ್ ಕೇಂದ್ರಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ಯುಎಇಯಲ್ಲಿ ಜಾರಿಗೆ ಬಂದ ಹೊಸ ವೀಸಾ ಸುಧಾರಣೆಗಳ ಭಾಗವಾಗಿ ಓವರ್‌ಸ್ಟೇ ದಂಡವನ್ನು ಸಹ ಬದಲಾಯಿಸಲಾಗಿದೆ. ವಿವಿಧ ರೀತಿಯ ವೀಸಾಗಳಲ್ಲಿನ ಅವಧಿ ಮೀರಿದ ಕಾರ್ಯವಿಧಾನಗಳನ್ನು ಏಕೀಕರಿಸುವ ಮೂಲಕ ಹೊಸ ಪ್ರಕ್ರಿಯೆಯನ್ನು ಮಾಡಲಾಗಿದೆ.

error: Content is protected !! Not allowed copy content from janadhvani.com