ಕಾಪು : ಹಝ್ರತ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್‍ರವರ ಜನ್ಮ ಮಾಸಾಚರಣೆಯ ರಬೀವುಲ್ ಅವ್ವಲ್ ತಿಂಗಳ ಅಂಗವಾಗಿ ಎಸ್‍ವೈಎಸ್ ಮತ್ತು ಎಸ್‍ಎಸ್‍ಎಫ್ ಉಡುಪಿ ಜಿಲ್ಲಾ ಸಮಿತಿಯ ಅಧಿನದಲ್ಲಿ ಜಿಲ್ಲಾ ಮಟ್ಟದ ಇಲಲ್ ಹಬೀಬ್ ಮೀಲಾದ್ ರ‍್ಯಾಲಿ ಶುಕ್ರವಾರ ಕಾಪುವಿನಲ್ಲಿ ನಡೆಯಿತು.
ಕಾಪು, ಪೊಲಿಪು ಮಸ್ಜಿದ್‍ನಿಂದ ಆರಂಭಗೊಂಡು ರಾಷ್ಟ್ರೀಯ ಹೆದ್ದಾರಿ 66- ಕಾಪು ಪೇಟೆಯ ಮೂಲಕ ಪೊಲಿಪು ಜುಮ್ಮಾ ಮಸೀದಿಯಲ್ಲಿ ಸಮಾಪ್ತಿಗೊಂಡಿತು. ರ‍್ಯಾಲಿಯಲ್ಲಿ ದಫ್ ಹಾಗೂ ಎಸ್‍ಎಸ್‍ಎಫ್, ಎಸ್‍ವೈಎಸ್, ಕರ್ನಾಟಕ ಮುಸ್ಲಿಮ್ ಜಮಾಅತ್‍ನ ಕಾಯಕರ್ತರು ಭಾಗವಹಿಸಿದ್ದರು.
ಪೊಲಿಪು ಸಯ್ಯಿದ್ ಶಂಸುದ್ಧೀನ್ ವಲಿಯುಲ್ಲಾಹಿ ದರ್ಗಾ ಝಿಯಾರತ್ ನಡೆಯಿತು. ಎಸ್‍ವೈಎಸ್ ಜಅಫರ್ ಅಸ್ಸಖಾಫ್ ತಂಙಳ್ ರ್ಯಾಲಿಗೆ ಚಾಲನೆ ನೀಡಿದರು. ಕಾಪು ಖಾಝಿ ಶೈಖುನಾ ಪಿ.ಬಿ. ಅಹ್ಮದ್ ಮುಸ್ಲಿಯಾರ್ ಪ್ರಾರ್ಥಿಸಿದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಎಂ.ಎಚ್.ಅಹ್ಮದ್ ಶಬೀರ್ ಸಖಾಫಿ ರ‍್ಯಾಲಿಯನ್ನು ಮುನ್ನಡೆಸಿದರು. ಎಸ್‍ವೈಎಸ್ ಜಿಲ್ಲಾಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ ಕೋಡಿ, ಎಸ್‍ಎಸ್‍ಎಫ್ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸಂದೇಷ ಭಾಷಣಗೈದರು.
ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳು, ಸುನ್ನೀ ದಾವತೇ ಇಸ್ಲಾಮೀ ಉಡುಪಿ ಜಿಲ್ಲೆಯ ಅಧ್ಯಕ್ಷ ಸಯ್ಯಿದ್ ಫರೀದ್ ಬಯ್ ಉಡುಪಿ, ಎಸ್‍ವೈಎಸ್ ಜಿಲ್ಲಾ ಉಪಾಧ್ಯಕ್ಷ ಎಚ್. ಅಬ್ದುಲ್ಲಾ ಸುಪರ್ ಸ್ಟಾರ್, ಎಸ್‍ವೈಎಸ್ ಕೋಶಾಧಿಕಾರಿ ಮುಹಿಯ್ಯುದ್ದೀನ್ ಹಾಜಿ ಗುಡ್ವಿಲ್, ಎಸ್‍ವೈಎಸ್ ಪ್ರಭಾರ ಪ್ರಧಾನ ಕಾರ್ಯದರ್ಶಿ ಬಶೀರ್ ಮುಸ್ಲಿಯಾರ್ ಮಜೂರು, ಎಸ್‍ಎಸ್‍ಎಫ್ ರಾಜ್ಯ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಸುನ್ನೀ ವಿಧ್ವಾಂಸ ಒಕ್ಕೂಟ ಉಡುಪಿ ವಲಯದ ಅಧ್ಯಕ್ಷ ಎಂ.ಕೆ. ಅಬ್ದುರ್ರಶೀದ್ ಕಾಮಿಲ್ ಸಖಾಫಿ, ಎಸ್‍ವೈಎಸ್ ಉಡುಪಿ ಜಿಲ್ಲಾ ಕೋಶಾಧಿಕಾರಿ ಮುಹಿಯ್ಯುದ್ದೀನ್ ಹಾಜಿಗುಡ್ವೀಲ್, ಎಸ್‍ಎಸ್‍ಎಫ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಮಜೂರು, ಕಾಪು ತಾಲ್ಲೂಕು ಕರ್ನಾಟಕ ಮುಸ್ಲಿಮ್ ಜಮಾಅತ್‍ನ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಅದ್ದು ಉಪಸ್ಥಿತರಿದ್ದರು. ಎಸ್‍ಎಸ್‍ಎಫ್ ರಾಜ್ಯ ಸದಸ್ಯರ ಮುಹಮ್ಮದ್ ರಕೀಬ್ ಕನ್ನಂಗಾರ್ ಕಾರ್ಯಕ್ರಮ ನಿರ್ವಹಿಸಿದರು.


















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ