ದಮ್ಮಾಮ್: ಕರ್ನಾಟಕದ ಮರ್ಕಝ್ ಎಂದೇ ಪ್ರಖ್ಯಾತ, ಮರ್ಹೂಂ ಶರಫುಲ್ ಉಲಮಾರ ದಿವ್ಯ ನೇತ್ರತ್ವದಲ್ಲಿ ಜನ್ಮತಾಳಿ ಜನ ಮನ್ನಣೆ ಪಡೆದ, ಧಾರ್ಮಿಕ ಲೌಕಿಕ ವಿಧ್ಯಾ ಕೇಂದ್ರ,
ಸಮಾಜ ಮುಖಿ ಸೇವೆಗಳಲ್ಲಿ
ತನ್ನದೇ ಆದ ಛಾಪನ್ನು ಮೂಡಿಸಿದ,
ಸಮುದಾಯಕ್ಕೆ ಬಹುಮುಖ ಪ್ರತಿಭೆಗಳನ್ನು ಕೊಡುಗೆ ನೀಡಿದ ಮಹಾ ಸಂಸ್ಥೆ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ.
ಇದರ ಸೌದಿ ಅರೇಬಿಯಾದ ಈಸ್ಟೆನ್ ಪ್ರೋವಿನ್ಸ್ ಸಮಿತಿಯ (ದಮ್ಮಾಂ, ಕೋಬಾರ್, ಜುಬೈಲ್, ಅಲ್ ಹಸ್ಸಾ, ಹಫರಲ್ ಬಾತಿನ್) ವಾರ್ಷಿಕ ಮಹಾಸಭೆಯು 29 ಸೆಪ್ಟೆಂಬರ್ ಗುರುವಾರದಂದು ಅಜೀಜ್ ಮುಸ್ಲಿಯಾರ್ ಕುತ್ತಾರ್’ ರವರ ನಿವಾಸದಲ್ಲಿ ಅಬ್ದುರಹ್ಮಾನ್ ಮದನಿ (ಹೊಸಂಗಡಿ) ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಬಷೀರ್ ತೋಟಾಲ್ ರವರು ಹೊಸ ಸಮಿತಿಯ ಆಯ್ಕೆ ಪ್ರಕ್ರಿಯಕ್ಕೆ ನೇತ್ರತ್ವ ವಹಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಸಲಹಾ ಸಮಿತಿ ಚೆಯರ್ಮೇನ್ N.S ಅಬ್ದುಲ್ಲ ಮಂಜನಾಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಪಡಿಕ್ಕಲ್, ಗಫೂರ್ ಸಜಿಪ ಮತ್ತು ಇನ್ನಿತರ ನೇತಾರರು ಬಾಗವಹಿಸಿದ್ದರು.
2022/24 ನೇ ಸಾಲಿನ ನೂತನ ಸಮಿತಿ
ಸಲಹಾ ಸಮಿತಿ ಚೆಯರ್ಮೇನ್: MKM ಅಬೂಬಕರ್ ಮದನಿ ಹೊಸಂಗಡಿ
ಸಲಹಾ ಸಮಿತಿ ಸದಸ್ಯರು
N.S ಅಬ್ದುಲ್ಲ ಮಂಜನಾಡಿ
ಅಬ್ದುಲ್ ಗಫೂರ್ ಸಜಿಪ
ಬಷೀರ್ ತೋಟಾಲ್
ಅಸ್ರು ಬಜಪೆ
ಅಧ್ಯಕ್ಷರು: ಮುಹಮ್ಮದ್ ಮಲೆಬೆಟ್ಪು
ಉಪಾಧ್ಯಕ್ಷರು:
ಮೂಸ ಹಾಜಿ ಕಿನ್ಯ
ಭಾಷಾ ಗಂಗಾವಳಿ
ಬಾಬಾ ಲತೀಫ್
ಪ್ರಧಾನ ಕಾರ್ಯದರ್ಶಿ: ಆಬಿದ್ ಕೊಡಗು
ಕಾರ್ಯದರ್ಶಿಗಳು
ಅಶ್ರಫ್ ನಾವುಂದ
ಇಬ್ರಾಹೀಂ ಚೋಕಾ
ಖೋಶಾಧಿಕಾರಿ: ರಷೀದ್ ವಳವೂರು
ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಅಬೂಬಕ್ಕರ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ಮೌಲೀದ್ ಸದಸ್ಸಿನೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಇಸ್ಮಾಯಿಲ್ ಪೊಯ್ಯಲ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಆಬಿದ್ ಕೊಡಗು ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?