janadhvani

Kannada Online News Paper

ದುಬೈ: ಚಿನ್ನ ವ್ಯಾಪಾರದಲ್ಲಿ ಕುಸಿತ -ವ್ಯಾಟ್ ಮುಕ್ತ ಗೊಳಿಸಲು ಚಿಂತನೆ

ದುಬೈ: ಮೌಲ್ಯವರ್ಧಿತ ತೆರಿಗೆಗಳಿಂದ ಚಿನ್ನವನ್ನು  ಮುಕ್ತಗೊಳಿಸಲಾಗುವುದು.ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 30 ರಿಂದ 50 ರಷ್ಟು ವಹಿವಾಟು ಕುಸಿತ ಕಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ಎನ್ನಲಾಗಿದೆ.

ಆಭರಣ ನಿರ್ಮಾಣಕ್ಕಾಗಿ ಮಾತ್ರ ತೆರಿಗೆಗಳನ್ನು ಸೀಮಿತಗೊಳಿಸುವ ಬಗ್ಗೆ ಚಿಂತಿಸಲಾಗಿದೆ.
ಮೌಲ್ಯಯುತ ತೆರಿಗೆಯಿಂದ ಚಿನ್ನದ ವ್ಯಾಪಾರಕ್ಕೆ ವಿನಾಯಿತಿ ನೀಡುವಂತೆ ಬೇಡಿಕೆ ಈ ಹಿಂದೆಯೇ ಕೇಳಿಬಂದಿತ್ತು.ಯುಎಇ ವಿಷೇಶವಾಗಿ ದುಬೈಯ ಮುಖ್ಯ ಆಕರ್ಷಣೆಯಾದ ಚಿನ್ನ  ವ್ಯಾಪಾರಕ್ಕೆ ತೊಡಕು ಉಂಟಾದಲ್ಲಿ ಅದು ವ್ಯಾಪಾರ ವಲಯದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಸೂಚಿಸಲಾಗಿತ್ತು.

ಆಮದು ಮಾಡಿದ ಚಿನ್ನದ ಕೇವಲ 10 ಪ್ರತಿಶತವನ್ನು ಮಾತ್ರ ಸ್ಥಳೀಯವಾಗಿ ಮಾರಾಟ ಮಾಡಲಾಗುತ್ತಿದೆ. ಸುಮಾರು 90% ರಷ್ಟು ಮರು-ರಫ್ತು ಮಾಡಲಾಗುತ್ತದೆ.

ಮೌಲ್ಯವರ್ಧಿತ ತೆರಿಗೆ ಮುಕ್ತ ಚಿನ್ನ ವ್ಯಾಪರಾ ಕೇಂದ್ರವನ್ನು ಸ್ಥಾಪಿಸುವುದು ಒಂದು ಉಪಾಯವಾಗಿ ಅಧಿಕಾರಿಗಳು ಕಾಣುತ್ತಿದ್ದಾರೆ.ಅಲ್ ಮಾಸ್ ಟವರ್ ಅನ್ನು ಆ ರೀತಿಯಲ್ಲಿ ಪರಿವರ್ತಿಸ ಬೇಕು ಎಂದು ಸೂಚಿಸಲಾಗಿದೆ.

ಮೌಲ್ಯ ವರ್ಧಿತ ತೆರಿಗೆ ಜಾರಿಗೆ ಬರುವ ಮುನ್ನ ಕಳೆದ ಡಿಸೆಂಬರ್ನಲ್ಲಿ ಚಿನ್ನದ ವ್ಯಾಪಾರದಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು.ಸೌದಿ ಅರೇಬಿಯಾದಲ್ಲಿನ ಜುವೆಲ್ಲರಿ ಗ್ರೂಪ್ಗಳು ಕೂಡ ಅಲ್ಲಿನ ವ್ಯಾಟ್ ತಪ್ಪಿಸಲು ಸೌದಿ ಸರ್ಕಾರವನ್ನು ಒತ್ತಾಯಿಸಿದೆ.

ಯುಎಇಯಲ್ಲಿ ವ್ಯಾಟ್ ಅನ್ನು ಪರಿಚಯಿಸಿದ ಮೂರು ತಿಂಗಳ ನಂತರ ಯುಎಇ ಹಣಕಾಸು ಇಲಾಖೆ ಪರಿಶೀಲನೆ ನಡೆಸಿತ್ತು.ಇಲಾಖೆಯು ಆ ಕುರಿತು ಇಡೀ ವ್ಯವಹಾರ ಸ್ಥಾಪನೆಗಳಿಗೆ ಪ್ರಸ್ತಾಪವನ್ನು ಕಳುಹಿಸಿದೆ.ಏಪ್ರಿಲ್ 29 ರ ಮೊದಲು ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.ಮಾರ್ಚ್ 31 ರವರೆಗಿನ ತೆರಿಗೆ ಸಲ್ಲಿಸಬೇಕು.

ಪ್ರತೀ ತಿಂಗಳು 28 ರ ಮೊದಲು, ತೆರಿಗೆ ರಿಟರ್ನ್ಸ್ ಗಳನ್ನು ಸರಕಾರಕ್ಕೆ ತಲುಪಿಸಕಾಗಿದೆ ಎಂಬುದು ಕಾನೂನಾಗಿದೆ.ಆದರೆ 28 ರಂದು ಸಾರ್ವಜನಿಕ ರಜಾದಿನವಾಗಿದ್ದಲ್ಲಿ ಮರುದಿನ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ.

ಎಲ್ಲಾ ತೆರಿಗೆದಾರರು ಮತ್ತು ಕೈಗಾರಿಕಾ ಕಂಪನಿಗಳು ನಿಗದಿಪಡಿಸಿದ ಸಮಯದಲ್ಲಿ ತಮ್ಮ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅವರ ಭಾದ್ಯತೆಯಾಗಿದೆ ಎಂದು ಎಫ್‌ಟಿಎ ಡೈರೆಕ್ಟರ್ ಖಾಲಿದ್ ಅಲಿ ಅಲ್ ಬುಸ್ತಾನಿ ಹೇಳಿದರು.ನೋಂದಾಯಿತ ಸಂಸ್ಥೆಗಳು ತೆರಿಗೆ ಅಂಕಿಅಂಶಗಳನ್ನು ಪರಿಶೀಲಿಸಿ, ಲೆಕ್ಕದಲ್ಲಿ ಯಾವುದೇ ತಪ್ಪು ಸಂಭವಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.ನಿಶ್ಚಿತ ದಿನಾಂಕದೊಳಗೆ ರಿಟೇರ್ನ್ಸ್ ಪಾವತಿಸಲು ಸಾಧ್ಯವಾಗದ ಸಂಸ್ಥೆಗಳು ದಂಡ ಪಾವತಿಸಬೇಕಾಗುತ್ತದೆ.

ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ತೆರಿಗೆ ಪಾವತಿಸಿದರೆ ಬ್ಯಾಂಕಿಂಗ್ ಗೆ ಹೆಚ್ಚಿನ ಸಮಯ ಬೇಕಾಗಬಹುದು.ಈ ಅಡಚಣೆಯನ್ನು ಮನಗಂಡು ಪಾವತಿಸುವಂತಾಗಬೇಕು. ಈ ಕಾರಣದಿಂದಾಗಿ ವಿಳಂಬವಾದರೂ ದಂಡವನ್ನು ಪಾವತಿಸಬೇಕಾಗಿದೆ ಎಂದು ಎಫ್‌ಟಿಎ ಮುಖ್ಯಸ್ಥರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com