ತಾಯಿಫ್(ಸೌದಿ ಅರೇಬಿಯಾ) : ಸಮಸ್ತ ಇಸ್ಲಾಮಿಕ್ ಸೆಂಟರ್ SIC ಕರ್ನಾಟಕ ತಾಯಿಫ್ ಸಮಿತಿ ಇತರ ಆಶ್ರಯದಲ್ಲಿ ಇತ್ತೀಚಿಗೆ ನಮ್ಮನ್ನಗಲಿದ ಸೂಫಿ ವರ್ಯರೂ, ಪ್ರಮುಖ ಪಂಡಿತರೂ, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಇದರ ಕೋಶಾಧಿಕಾರಿಯೂ ಆದ ಶೈಖುನಾ ಚೇಲಕ್ಕಾಡ್ ಮುಹಮ್ಮದ್ ಮುಸ್ಲಿಯಾರ್
(ನ, ಮ) ರವರ ಅನುಸ್ಮರಣೆ, ದುಃಅ ಮಜ್ಲಿಸ್ ಹಾಗು ಸನ್ಮಾನ ಸಮಾರಂಭ ಸಮಸ್ತ ಇಸ್ಲಾಮಿಕ್ ಸೆಂಟರ್ ತಾಯಿಫ್ ನಲ್ಲಿ ಜರಗಿತು.
ಹುಸೈನ್ ದಾರಿಮಿ ಉಸ್ತಾದರ ಅಧ್ಯಕ್ಷತೆಯಲ್ಲಿ
ಮುಖ್ಯ ಭಾಷಣ ಮಾಡಿದ ಬಹು ಶಾಫಿ ದಾರಿಮಿ ಉಸ್ತಾದರು ಶೈಖುನಾ ಚೇಲಕ್ಕಾಡ್ ಉಸ್ತಾದರ ಪಾಂಡಿತ್ಯ, ಜ್ಞಾನದ ಬಗ್ಗೆ ಅನುಸ್ಮರಿಸುತ್ತಾ ಚೇಲಕ್ಕಾಡ್ ಉಸ್ತಾದರ ಅಗಲಿಕೆಯು ನಮಗೆಲ್ಲ ತುಂಬಲಾರದ ನಷ್ಟ ಎಂದು ಉಸ್ತಾದರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದರು._
ಕರ್ನಾಟಕ ಸಮಸ್ತ ಇಸ್ಲಾಮಿಕ್ ತಾಯಿಫ್ ಸಮಿತಿ ಯ ಅದ್ಯಕ್ಷರಾದ ಬಹು ಹುಸೈನ್ ದಾರಿಮಿ ಉಸ್ತಾದರ ನೇತೃತ್ವದಲ್ಲಿ ದಿಕ್ರ್ ದುಃಅ ಮಜ್ಲಿಸ್ ನಡೆಯಿತು.
ಇದೇ ಸಂಧರ್ಭದಲ್ಲಿ SIC ಸಮಸ್ತ ಇಸ್ಲಾಮಿಕ್ ಸೆಂಟರ್ ತಾಯಿಫ್ ಇದರ ಉಪ ಘಟಕಗಳ ಕಾರ್ಯ ಚಟುವಟಿಕೆಗಳ ನೇತೃತ್ವ ವಹಿಸಿದ ಬಹು ಶಾಫಿ ದಾರಿಮಿ ಉಸ್ತಾದರನ್ನು SIC ಕರ್ನಾಟಕ ತಾಯಿಫ್ ಸಮಿತಿ ಇದರ ಅದ್ಯಕ್ಷ, ಹಾಗು ಕಾರ್ಯದರ್ಶಿ ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಸ್ತಾದ್ ಬಹು ಶರೀಫ್ ಫೈಝಿ SIC ತಾಯಿಫ್ ಕೇಂದ್ರ ಸಮಿತಿ ಅಧ್ಯಕ್ಷರು ,ಮುನೀರ್ ಫೈಝಿ ರಿಯಾದ್,ಬಶೀರ್ SIC ತಾಯಿಫ್ ಕೇಂದ್ರ ಸಮಿತಿ ಚೇರ್ ಮನ್, ಲೆತೀಫ್ ಫರೂಕು, ಕೋಶಾಧಿಕಾರಿ SIC ತಾಯಿಫ್ ಕೇಂದ್ರ ಸಮಿತಿ.
ಸಭೆಯಲ್ಲಿ SIC ಕೇಂದ್ರ ಸಮಿತಿ ಹಾಗು ಕರ್ನಾಟಕ ಸಮಿತಿಯ ಸದಸ್ಯರು ಉಪಸ್ಥಿಯಿದ್ದರು. ಕಾರ್ಯಕ್ರಮದಲ್ಲಿ SIC ಸಮಸ್ತ ಕರ್ನಾಟಕ ತಾಯಿಫ್ ಸಮಿತಿ ಕಾರ್ಯದರ್ಶಿ ಹಸೈನಾರ್ ಟಿ ಯಂ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ವರದಿ: ಅಬೂ ಅಯಾನ್ ಕೊಡಂಗಾಯಿ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು